ಕೊಪ್ಪಳ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇದಿ ಬಿಸಾಕಿದ ಬೀಡಿ. ಬೀಡಿಯನ್ನು ಸೇದಿ ಎಸೆದಿದ್ದಾರೆ. ಇದೀಗ ಅದೇ ಬೀಡಿಯನ್ನು ಸೇದಲು ಮತ್ತೆ ಹೊರಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಜಿಲ್ಲೆಯ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಕ್ಕೆ ನೀಡಿದ್ದಾರೆ. ಬಿಜೆಪಿಯವರು ಏನು ಮರ್ಯಾದೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯನ್ನು ತೆಗೆದು ಹೊರಗೆ ಎಸೆದಿದ್ರು. ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದರು. ಮುಂಬರುವ ದಿನಗಳಲ್ಲಿ ಜೆಡಿಎಸ್ ಪ್ರಬಲವಾಗಲಿದೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಮುಸ್ಲಿಮರು, ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಂ ಒಕ್ಕಲಿಗರು ಒಂದಾಗಿದ್ದಾರೆ. ನವೆಂಬರ್ ತಿಂಗಳ ನಂತರ ನೋಡಿ ಜೆಡಿಎಸ್ ಏನು ಎಂಬುವುದು ಗೊತ್ತಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡು ರಾಷ್ಟೀಯ ಪಕ್ಷಗಳ ಮಧ್ಯೆ ಮೂರನೆಯ ಕಣ್ಣಾಗಿ ಜೆಡಿಎಸ್ ಬೆಳೆಯುತ್ತಿದೆ. 1994ರಲ್ಲಿ ಇದ್ದ ಸ್ಥಿತಿ 2023 ಕ್ಕೆ ಜೆಡಿಎಸ್ಗೆ ಉತ್ತಮ ಪ್ರತಿಕ್ರಿಯೆ ಇದೆ. 2023ಕ್ಕೆ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದರು.