ಬೆಂಗಳೂರು: ಗಣಪತಿ ಹಬ್ಬಕ್ಕೆ ಗಣೇಶ ಇಡಲು ಅನುಮತಿಗಾಗಿ ಅಲೆದಾಡಬೇಕಾಗಿಲ್ಲ. ಸಬ್ ಡಿವಿಷನ್ ಎಇಇಗೆ ಕೊಟ್ರೆ ಅವ್ರೇ ಬೆಸ್ಕಾಂ, ಪೊಲೀಸ್, ಅಗ್ನಿಶಾಮಕ ದಳದ ಅನುಮತಿಯ ನಿರಾಪೇಕ್ಷಣಾ ಪತ್ರವನ್ನು ಕೊಡ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಹಿಂದೆ ಗಣಪತಿ ಇಡಲು ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ದಳದ ಅನುಮತಿ ಪಡೆದುಕೊಳ್ಳಬೇಕಿತ್ತು. ಈ ಆದೇಶ ಕೈ ಬಿಟ್ಟು ಈಗ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಗಣೇಶ ಹಬ್ಬ ಮಾಡೋರಿಗೆ ಬಿಬಿಎಂಪಿ ಗುಡ್ ನ್ಯೂಸ್ ನೀಡಿದೆ.
ಬೆಸ್ಕಾಂ ಪೊಲೀಸ್ ಬಿಬಿಎಂಪಿ ಪ್ರತ್ಯೇಕ ಅನುಮತಿ ಬೇಕಾಗಿಲ್ಲ. ಬದಲಾಗಿ ಏಕಗವಾಕ್ಷಿ ವ್ಯವಸ್ಥೆ ಯಲ್ಲಿ ಅನುಮತಿ ನೀಡಲಾಗಿದೆ. ದೊಡ್ಡ ಗಣೇಶ ವಿಗ್ರಹಗಳ ವಿಸರ್ಜನೆಗೆ ನಾಲ್ಕು ದೊಡ್ಡ ಕಲ್ಯಾಣಿಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಣ್ಣ ವಿಗ್ರಹಗಳಿಗೆ ಆಯಾಯ ಸ್ಥಳೀಯವಾಗಿ ಕೆರೆಗಳ ವ್ಯವಸ್ಥೆ ಮಾಡಲಾಗಿದೆ.
ಮನೆಗಳಲ್ಲಿಟ್ಟ ಗಣೇಶನನ್ನು ಮನೆಯಲ್ಲಿಯೇ ಬಕೆಟ್ ನೀರಿನಲ್ಲಿ ವಿಸರ್ಜಿಸಬೇಕು. 15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ. ಆಗಸ್ಟ್ 31- ರಿಂದ ಸೆಪ್ಟೆಂಬರ್-15 ರವರೆಗೆ ಮಾತ್ರ ಗಣೇಶ ಇಡಲು ಅನುಮತಿ. 15 ದಿನಕ್ಕಿಂತ ಹೆಚ್ಚಿನ ದಿನ ಗಣೇಶನ ನ್ನು ಇಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.