Wednesday, January 22, 2025

Big Breaking: ‘ಜೊತೆ ಜೊತೆಯಲಿ’ ಸೀರಿಯಲ್‌ ನಟ ಅನಿರುದ್ಧ್‌ಗೆ 2 ವರ್ಷ ನಿಷೇಧ.!

ಬೆಂಗಳೂರು: ಕಿರುತೆರೆಯಿಂದ ನಟ ಅನಿರುದ್ಧ್‌ ಅವರನ್ನ ಹೊರಗೆ ಇಡಲು ಕಿರುತೆರೆ ನಿರ್ಮಾಪಕರ ಸಂಘದಿಂದ ನಿರ್ಧಾರ ಮಾಡಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಭಾಸ್ಕರ್​, ನಟ ಅನಿರುದ್ಧ್‌ರನ್ನ ನಾವು ಬ್ಯಾನ್‌ ಮಾಡ್ತಿಲ್ಲ. ಕಿರುತೆರೆಯಿಂದ 2 ವರ್ಷ ದೂರವಿಟ್ಟಿದ್ದೇವೆ. ಯಾವುದೇ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಹೇಳಿದ್ದಾರೆ.

ಶೂಟಿಂಗ್‌ ಸಮಯದಲ್ಲಿ ಅನಿರುದ್ಧ್‌ ಕಿರಿಕ್‌ ಮಾಡ್ತಿದರು. ಸ್ಟ್ರೀಪ್‌ ವಿಚಾರವಾಗಿಯೂ ನಿರ್ದೇಶಕರ ಜೊತೆ ಗಲಾಟೆ ಮಾಡಿದ್ದಾರೆ. ನಿರ್ದೇಶಕ ಮಧು ಉತ್ತಮ್‌ಗೆ ನಟ ಅನಿವೃದ್ಧ ಅವರು ಮೂರ್ಖ ಅಂತ ಕರೆದಿದ್ದಾರೆ. ದೃಶ್ಯ ಬದಲಾವಣೆ ಮಾಡುವಂತೆ ಕಿರಿಕ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲವು ಬಾರಿ ಅನಿವೃದ್ಧ್ ಜಗಳವಾಡಿ ಸೆಟ್‌ನಿಂದ ಹೊರ ಹೋಗಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್‌ ಸಮಯದಲ್ಲಿ ಅನಿರುದ್ಧ್‌ ವರ್ತನೆಯಿಂದ ನಿರ್ಮಾಪಕ ಜಗದೀಶ್‌ ಬೇಸತ್ತು ಹೋಗಿದ್ದಾರೆ. ನಿರ್ಮಾಪಕ ಆರೂರು ಜಗದೀಶ್‌ ಅನಿರುದ್ಧ್‌ ವಿರುದ್ಧ ದೂರು ನೀಡಲಾಗಿದೆ ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಜಗದೀಶ್‌ ದೂರಿನ ಅನ್ವಯ ನಿರ್ಮಾಪಕರ ಸಂಘದಿಂದ ಸಭೆ ಲಾನಡೆಸಗಿ.ತ್ತು  ಈ ಸಭೆಯಲ್ಲಿ ಅನಿರುದ್ಧ್‌ರನ್ನ 2 ವರ್ಷ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES