Wednesday, January 22, 2025

“ಜೊತೆ ಜೊತೆಯಲಿ” ನಿರ್ದೇಶಕರ ವಿರುದ್ಧ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ನಟ ಅನಿರುದ್ಧ್​.!

ಬೆಂಗಳೂರು: ನನಗೆ ಯಾವುದೇ ದುರಹಂಕಾರ ವಿಲ್ಲ. ನನ್ನ ಮಾನವೇ ಹಾನಿಯಾಗಿದೆ. ಒಂದುವರೆ ವರ್ಷದಿಂದು ತುಂಬಾ ಕಷ್ಠದಿಂದ ಶೂಟಿಂಗ್ ನಡೆಸುತ್ತಿದ್ದೇನೆ ಎಂದು ಜೊತೆ ಜೊತೆಯಲಿ ಧಾರವಾಹಿ ಕಿರುತೆರೆ ನಟ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಜೊತೆಜೊತೆಯಲಿ ತಂಡ ನಟ ಅನಿರುದ್ಧ್ ವಿರುದ್ಧ ತಿರುಗಿಬಿದ್ದಿದೆ. ಕಳೆದ ಕೆಲವು ದಿನಗಳಿಂದ ಅನಿರುದ್ಧ್ ವರ್ತನೆಯಿಂದ ಧಾರಾವಾಹಿ ತಂಡ ಬೇಸತ್ತು ಹೋಗಿತ್ತು. ಹೀಗಾಗಿ ಇಂದು ಧಾರಾವಾಹಿಯಿಂದಲೇ ಅಲ್ಲದೇ ಕನ್ನಡ ಕಿರುತೆರೆ ಧಾರವಾಹಿಗಳಿಂದ 2 ವರ್ಷ ಬ್ಯಾನ್​ ಮಾಡಲು ಕಿರುತೆರೆ ನಿರ್ಧರಿಸಿದೆ.

ಈ ಬಗ್ಗೆ ಇಂದು ಸುದೀರ್ಘವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿರುದ್ಧ್, ಜೊತೆ ಜೊತೆಯಲಿ ಪಾತ್ರಕ್ಕೆ ತುಂಬಾ ಕಷ್ಟಪಟ್ಟಿದ್ದೇನೆ. ಶೂಟಿಂಗ್ ಸೆಟ್​ನಲ್ಲಿ ಪದೇ ಪದೇ ಗಲಾಟೆ ಎನ್ನುವುದು ಶುದ್ಧ ಸುಳ್ಳು. ತಮ್ಮ ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ ನಾನು ಈ ರೀತಿ ಮಾಡಿದ್ದೇನೆ ಎಂದು ತಮ್ಮ ಮೇಲಿನ ಆರೋಪಗಳನ್ನ ತಳ್ಳಿಹಾಕಿದರು.

ರಾತ್ರಿ-ಹಗಲು ಎನ್ನದೇ ಶೂಟಿಂಗ್ ಮಾಡುತ್ತಿದ್ದರು, ದುಡ್ಡಿಗಾಗಿ ನಾನು ಯಾವತ್ತೂ ಪೀಡಿಸಿಲ್ಲ. ಈ ಪಾತ್ರಕ್ಕೆ ತುಂಬಾ ಕಷ್ಠಪಟ್ಟು ನನ್ನ ದೇಹದ 12 ಕೆ.ಜಿ ಇಳಿಸಿದ್ದೇನೆ. ಇರುವಷ್ಟು ದಿನ ನಿಷ್ಠೆಯಿಂದ ಈ ಧಾರವಾಹಿಯಲ್ಲಿ ಕೆಲಸ ಮಾಡಿದ್ದೇನೆ. ಧಾರವಾಹಿಗಾಗಿ ರಾತ್ರಿ-ಹಗಲು ದುಡಿದಿದ್ದೇನೆ ಎಂದು ಅನಿರುದ್ಧ್​ ಹೇಳಿದರು.

ಶೂಟಿಂಗ್ ಇಂದಿನ ದಿನ ಸ್ಕ್ರಿಪ್ಟ್​ ಕೊಡಿ, ನಾನು ತಯಾರಿ ಮಾಡಿಕೊಳ್ಳಬೇಕು ಎಂದಿದ್ದೇನೆ. ಎಷ್ಟೋ ಸಲ ಮನೆಯಲ್ಲಿಯೇ ಶೂಟಿಂಗ್ ಮಾಡಿದ್ದೇವೆ ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರ ವಿರುದ್ಧ ನಟ ಅನಿರುದ್ಧ್ ಆಕ್ರೋಶ ವ್ಯಕ್ತಪಡಿಸಿದರು.

 

RELATED ARTICLES

Related Articles

TRENDING ARTICLES