Tuesday, February 25, 2025

ಕಳೆದ 10 ವರ್ಷದಿಂದ ಹೆತ್ತ ಮಗನಿಗಾಗಿ ಕಾದು ಪ್ರಾಣಬಿಟ್ಟ ತಾಯಿ.!

ಮೈಸೂರು: ಹೆತ್ತ ಮಗನಿಗಾಗಿ ಕಾದು ತಾಯಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ಹುಣಸೂರು ತಾಲ್ಲೂಕಿನ ಉದ್ದೂರು ಗ್ರಾಮದಲ್ಲಿ ಘಟನೆ.

ಕಳೆದ ಹತ್ತು ವರ್ಷದ ಹಿಂದೆ ಗ್ರಾಮದ ಚಂದ್ರೆಗೌಡ ಪುಟ್ಟಮ್ಮ ದಂಪತಿಯ ಏಕೈಕ ಪುತ್ರ ಮಂಜು ಮನೆಬಿಟ್ಟು ಹೋಗಿದ್ದ, ಸುಮಾರು ಹತ್ತು ವರ್ಷಗಳ ಹಿಂದೆ ಕಾಣೆಯಾದ ಮಗನ ನೆನಪಿನಲ್ಲೇ ತಾಯಿ ಕೊನೆಯುಸಿರೆಳೆದಿದ್ದಾಳೆ.

ತಾಯಿಯ ಸಾವಿನ ಸುದ್ದಿ ತಿಳಿದಾದರೂ ಮಗ ಬರುತ್ತಾನೆಂದು ತಂದೆ ಕಾಯುತ್ತಿದ್ದಾನೆ. ನಾಪತ್ತೆಯಾಗಿರುವ ಮಂಜುಗೆ ಸುಮಾರು 33 ವರ್ಷ ವಯಸ್ಸು ಆಗಿದೆ. ಕಳೆದ ಹತ್ತು ವರ್ಷಗಳದರೂ ಮಂಜು ಮನೆಗೆ ಬಂದಿಲ್ಲ. ಸದ್ಯ ಇಲ್ಲಿಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪಾಲಕರು ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES