Wednesday, December 25, 2024

ಯಶ್ ಸಿನಿಮಾ ಪೋಸ್ಟರ್ ಲೀಕ್.. ಫ್ಯಾನ್ಸ್ ಫುಲ್ ಶಾಕ್

ರಾಜಾಹುಲಿ ಹೇರ್​ ಸ್ಟೈಲ್​ ಕಂಪ್ಲೀಟ್​ ಚೇಂಜ್ ಆಗಿದೆ. ನೆಕ್ಸ್ಟ್​ ಸಿನಿಮಾದಲ್ಲಿ ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಳ್ತೀನಿ ಅಂತಾ ಇತ್ತೀಚೆಗೆ ರಾಕಿಭಾಯ್​ ಸರ್ಪ್ರೈಸ್​ ಕೊಟ್ಟಿದ್ರು. ಇದೀಗ ಸ್ಯಾಂಡಲ್​ವುಡ್​ ತೂಫಾನ್ ನ್ಯೂ ಹೇರ್​ಸ್ಟೈಲ್​​ ಲುಕ್ ಸಖತ್​​​ ವೈರಲ್​ ಆಗಿದೆ. ಲೀಕ್​ ಆಗಿರೋ ಈ ಪೋಸ್ಟರ್​​​​ ಅಸಲಿ ಕರಾಮತ್ತೇನು..? ನೀವೇ ಓದಿ.

  • ನ್ಯಾಷನಲ್​ ಸ್ಟಾರ್​ ರಾಕಿಭಾಯ್​ ಮಿಂಚಿನ ಅವತಾರ..!

ಈಸ್ಟ್​​ ಟು ವೆಸ್ಟ್​​, ನಾರ್ಥ್​​ ಟು ಸೌಥ್​ ರಾಕಿಭಾಯ್​ದೇ ಹವಾ. ಮಾಸ್ಟರ್​ ಪೀಸ್​ ಸದ್ಯ ಭಾರತದಲ್ಲಿ ಸದ್ದು ಮಾಡ್ತಿರೋ ಟಾಪ್​​​​ ಮೋಸ್ಟ್​​ ನಟ. ರಾಜಾಹುಲಿ ಏನು ಮಾಡಿದ್ರೂ ಅದು ಟಾಪ್​ ಟ್ರೆಂಡಿಂಗ್​​​ ಸುದ್ದಿಗಳಲ್ಲಿ ಒಂದಾಗಿರುತ್ತೆ. ಕಾಸ್ಟ್ಯೂಮ್ಸ್​​​​, ಹೇರ್​​ಸ್ಟೈಲ್​​​​, ಡ್ರೆಸ್​​ ಸೆನ್ಸ್​ ಎಲ್ಲಾ ವಿಭಾಗದಲ್ಲೂ ರಾಕಿಭಾಯ್​​ ಸ್ಟೈಲಿಶ್​ ಐಕಾನ್​​ ಆಗಿದ್ದಾರೆ.

ನೆಕ್ಸ್ಟ್​​ ಸಿನಿಮಾದಲ್ಲಿ ನ್ಯೂ ಹೇರ್​ ಸ್ಟೈಲ್​ನಲ್ಲಿ ಕಾಣಿಸ್ತೀನಿ ಅಂತಾ ಮೊನ್ನೆಯಷ್ಟೇ ರಾಕಿಭಾಯ್​ ಮಾತು ಕೊಟ್ಟಿದ್ರು. ಇದೀಗ ರಾಜಾಹುಲಿಯ ನಯಾ ಅವತಾರ ರಿವೀಲ್​ ಆಗಿದ್ದು ಸಖತ್​ ವೈರಲ್​ ಆಗಿದೆ. ಅಂತೂ ಲೀಕ್​ ಆಗಿರೋ ಈ ಫೋಟೋ ನೋಡಿದ ಫ್ಯಾನ್ಸ್​ ಪೆಚ್ಚಾಗಿದ್ದಾರೆ. ಯಶ್​-19 ಸಿನಿಮಾ ಅಪ್​​ಡೇಟ್​ ಬಗ್ಗೆ ಕುತೂಹಲದಿಂದ ಎದುರು ನೋಡ್ತಿದ್ದ ಕೋಟ್ಯಂತರ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಬಾಪ್​ ರೇ ಬಾಪ್​​​. ವಾಹ್​​..​​. ಸೂಪರ್​​​​​ ರಾಕಿಭಾಯ್​ ಅಂತಾ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ರಾಕಿಭಾಯ್​ ನರ್ತನ್​ ಪ್ರಾಜೆಕ್ಟ್​​​ನಲ್ಲಿ ಆ್ಯಕ್ಟ್ ಮಾಡ್ತಾರೆ ಅನ್ನೋ ಗುಸು ಗುಸು ಸುದ್ದಿಗಳು ಹರಿದಾಡ್ತಲೇ ಇವೆ. ಯಶ್-19 ಸಿನಿಮಾ ಯಾವುದು..? ಯಾವ ಕಥೆ..? ಯಾರು ಡೈರೆಕ್ಟ್​ ಮಾಡ್ತಾರೆ ಅನ್ನೋ ದೊಡ್ಡ ಮಟ್ಟದ ಚರ್ಚೆಗಳ ನಡುವೆ ಈ ಪೋಸ್ಟರ್​ ಸಖತ್​ ಸೌಂಡ್​ ಮಾಡ್ತಿದೆ. ಉದ್ದನೆಯ ಕೂದಲು ಬಿಟ್ಟಿರೋ ಯಶ್​​​ ಹಾಲಿವುಡ್​ ಸಿನಿಮಾ ಲುಕ್​ನಲ್ಲಿ ಕಾಣಿಸ್ತಿದ್ದಾರೆ. ಅಂತೂ ಸೋಶಿಯಲ್​ ಮೀಡಿಯಾದಲ್ಲಿ ಲೀಕ್​ ಆಗಿ ಸದ್ದು ಮಾಡ್ತಿರೋ ಈ ಪೋಸ್ಟರ್​ ರಿಯಲ್ಲಾ..? ಫೇಕಾ..? ಅನ್ನೋದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES