Wednesday, January 22, 2025

ಪುನೀತ್​ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

ಬೆಂಗಳೂರು: ದಿವಂಗತ ಪವರ್ ಸ್ಟಾರ್​ ಪುನೀತ್​ ರಾಜಕುಮಾರ್​ ಅವರ ಸಮಾಧಿಗೆ ನಟ ವಿಜಯ್ ದೇವರಕೊಂಡ ಅವರು ಪುಷ್ಪ ನಮನ ಸಲ್ಲಿಸಿದರು.

ಲೈಗರ್ ಚಿತ್ರದ ಪ್ರೊಮೋಷನ್ಸ್ ಗಾಗಿ ಇಂದು ಬೆಂಗಳೂರಿಗೆ ವಿಜಯ್ ದೇವರಕೊಂಡ ಅವರು ಆಗಮಿಸಿದ್ದಾರೆ. ಏರ್​ಪೋರ್ಟ್ ನಿಂದ ನೇರವಾಗಿ ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ ವಿಜಯ್ ದೇವರಕೊಂಡ ಜೊತೆ ನಟಿ ಅನನ್ಯ ಪಾಂಡೆ, ನಟ ವಿಶ್ ಭಾಗಿಯಾದರು.

ಇದೇ ಆಗಸ್ಟ್ 25ಕ್ಕೆ ಲೈಗರ್​ ಸಿನಿಮಾ ಭಾರತಾದ್ಯಂತ ತೆರೆಗಪ್ಪಳಿಸಲಿದೆ. ತೆಲುಗು, ಕನ್ನಡದ ಜೊತೆ ಐದು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಅಪ್ಪು ಸಮಾಧಿ ಜತೆಗೆ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಡಾ. ರಾಜ್ ಕುಮಾರ್ ಸಮಾಧಿಗೂ ನಮನ ಸಲ್ಲಿಸಲಿದ್ದಾರೆ.

ಸಿನಿಮಾ ಪ್ರೊಮೋಷನ್ ಗಾಗಿ ಬಂದಿದ್ದೇನೆ. ಇಂತಹ ಸಮಯದಲ್ಲಿ ಭೇಟಿ ನೀಡಿರೋದ್ರಿಂದ ಸಮಾಧಿ ಬಳಿ ಮಾತನಾಡೋದು ಸಮಂಜಸವಲ್ಲ. ಸಿನಿಮಾ ಬಗ್ಗೆ ಸುದ್ದಿಗೋಷ್ಠಿಯಲ್ಲೇ ಮಾತನಾಡೋದಾಗಿ ನಟ ವಿಜಯ್ ದೇವರಕೊಂಡ ಹೇಳಿದರು.

RELATED ARTICLES

Related Articles

TRENDING ARTICLES