Wednesday, January 22, 2025

ಇಂದು ದೇಶದೆಲ್ಲೆಡೆ ಶ್ರೀ ಕೃಷ್ಣಾ ಜನ್ಮಾಷ್ಟಮಿ ಸಂಭ್ರಮ

ಬೆಂಗಳೂರು : ಜನ್ಮಾಷ್ಟಮಿಯನ್ನ ಬರಮಾಡಿಮಾಡಿಕೊಳ್ಳಲು ರಾಜಾಜಿನಗರ ಇಸ್ಕಾನ್ ಸಿದ್ಧತೆ ನಡೆಯುತ್ತಿದ್ದು, ನೆನ್ನೆಯಿಂದಲೇ ವಿಶೇಷ ಪೂಜೆಗಳು ನೆರವೇರುತ್ತಿದೆ.

ಪ್ರತಿ ವರ್ಷದಂತೆ ಈ ಭಾರಿಯೂ ಇಸ್ಕಾನ್ ದೇವಾಲಯ ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಣೆ ಮಾಡಲಾಗುತ್ತಿದ್ದು, ಇಂದು ಬೆಳಿಗ್ಗೆ 4:30ಕ್ಕೆ ಮಂಗಳಾರತಿ ನಡೆದಿದೆ. 7:15ಕ್ಕೆ ದರ್ಶನ ಆರತಿ, 8:45ಕ್ಕೆ ರಾಧಾ ಕೃಷ್ಣರ ಉಯ್ಯಾಲೆ ಸೇವೆ, 11ಕ್ಕೆ ರಾಧಾಕೃಷ್ಣ ಉತ್ಸವ ಮೂರ್ತಿಗೆ ಮೊದಲ ಅಭಿಷೇಕ, ಮಧ್ಯಾಹ್ನ 12ಕ್ಕೆ ರಾಜಭೋಗ್ ನೈವೇದ್ಯ, ಸಂಜೆ 5 ಕ್ಕೆ ರಾಧಾಕೃಷ್ಣ ಉತ್ಸವಮೂರ್ತಿಗೆ ಎರಡನೇ ಅಭಿಷೇಕ, ರಾತ್ರಿ 8:30 ಕ್ಕೆ ಮೂರನೇ ಅಭಿಷೇಕ , 10:30ಕ್ಕೆ ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.

RELATED ARTICLES

Related Articles

TRENDING ARTICLES