Monday, November 18, 2024

ಸೇನೆಗೆ ಸೇರಲು ಬಯಸಿದ್ದೆ ಸಾಧ್ಯವಾಗಲಿಲ್ಲ; ರಾಜನಾಥ್ ಸಿಂಗ್​

ನವದೆಹಲಿ: ನಾನು ಸೇನೆಗೆ ಸೇರಲು ಬಯಸಿದ್ದೆ, ಆದರೆ ಕುಟುಂಬದಲ್ಲಿನ ಸಮಸ್ಯೆಗಳಿಂದ ಸಾಧ್ಯವಾಗಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಣಿಪುರದಲ್ಲಿ ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಮತ್ತು 57 ನೇ ಮೌಂಟೇನ್ ವಿಭಾಗದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ನಾನು ನನ್ನ ಬಾಲ್ಯದ ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಸಹ ಸೈನ್ಯಕ್ಕೆ ಸೇರಲು ಬಯಸಿದ್ದೆ, ಒಮ್ಮೆ ನಾನು ಶಾರ್ಟ್ ಸರ್ವಿಸ್ ಆಯೋಗದ ಪರೀಕ್ಷೆಗೆ ಹಾಜರಾಗಿ ಲಿಖಿತ ಪರೀಕ್ಷೆಯನ್ನು ನೀಡಿದ್ದೆ. ಆದರೆ, ನನ್ನ ಕುಟುಂಬದಲ್ಲಿನ ಕೆಲವು ಸನ್ನಿವೇಶಗಳಿಂದಾಗಿ, ನನ್ನ ತಂದೆಯ ಸಾವಿನಿಂದ ನಾನು ಸೇನೆಗೆ ಸೇರಲು ಸಾಧ್ಯವಾಗಲಿಲ್ಲ ಎಂದರು.

ನೀವು ಮಗುವಿಗೆ ಸೇನಾ ಸಮವಸ್ತ್ರವನ್ನು ನೀಡಿದರೆ ವ್ಯಕ್ತಿತ್ವ ಬದಲಾಗುತ್ತದೆ. ಈ ಸಮವಸ್ತ್ರದಲ್ಲಿ ಒಂದು ವರ್ಚಸ್ಸಿದೆ ಎಂದು ಹೇಳಿದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಸಚಿವರು ಸೈನಿಕರನ್ನು ಭೇಟಿ ಮಾಡಿ, ಭಾರತ-ಚೀನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭದ್ರತಾ ಪಡೆಗಳು ತೋರಿದ ಶೌರ್ಯವನ್ನು ಸಿಂಗ್ ನೆನಪಿಸಿಕೊಂಡರು.

RELATED ARTICLES

Related Articles

TRENDING ARTICLES