Sunday, January 19, 2025

ನಾಗಶೇಖರ್ ತಾಕತ್ತು ಅಂಬಿಗೆ ಗೊತ್ತಿತ್ತು.. ಬಚ್ಚಿಟ್ಟ ಮಾತು

ಸ್ಯಾಂಡಲ್​ವುಡ್​ನಲ್ಲಿ ಸೂಪರ್​ ಹಿಟ್​​ ಸಿನಿಮಾಗಳನ್ನು ಕೊಟ್ಟಿ ಹೆಗ್ಗಳಿಕೆ ಮೋಸ್ಟ್​ ಕ್ರಿಯೇಟಿವ್​ ಡೈರೆಕ್ಟರ್​ ನಾಗಶೇಖರ್ ಅವರದ್ದು. ಆದ್ರೆ, ​ ಮಾಸ್ತಿಗುಡಿ ಸಿನಿಮಾ ದುರಂತದ ನಂತ್ರ ತೆರೆಮರೆಗೆ ಸರಿದಿದ್ರು. ನಿರ್ಮಾಪಕರ ಪಾಲಿಗೆ ಕಂಡು ಕಾಣದಾಗಿದ್ದ ಪ್ರತಿಭಾನ್ವಿತ ನಿರ್ದೇಶಕ ಕನ್ನಡ ಬಿಟ್ಟು ತೆಲುಗು, ತಮಿಳಿಗೆ ವಲಸೆ ಹೋಗಿ ಬಿಟ್ರು. ಯೆಸ್​​.. ನಾಗಶೇಖರ್​ ಈ ದಿಟ್ಟ ನಿರ್ಧಾರದ ಹಿಂದೆ ರೋಚಕ ಸತ್ಯಗಳಿವೆ. ಮನದಾಳದ ನೋವುಗಳನ್ನು ಪವರ್ ಟಿವಿ ಜತೆ ಬಿಚ್ಚಿಟ್ಟಿದ್ದಾರೆ. ಆ ಕಹಿ ಸತ್ಯಗಳನ್ನು ನೀವೇ ಓದಿ.

ಮಾಸ್ತಿಗುಡಿ ನಂತ್ರ ನಾಗಶೇಖರ್​ ಸಿನಿಜರ್ನಿಗೆ​ ಏನಾಯ್ತು..?

ಅರಮನೆ, ಸಂಜು ವೆಡ್ಸ್​​ ಗೀತಾ, ಮೈನಾ ಅಂತಹ ಸೂಪರ್ ಹಿಟ್​ ಸಿನಿಮಾಗಳನ್ನ ಕೊಟ್ಟಿದ್ದ ನಿರ್ದೇಶಕ ಪಿ.ಸಿ ನಾಗಶೇಖರ್​ ಕನ್ನಡ ಚಿತ್ರರಂಗದಲ್ಲಿ ಸೈಲೆಂಟ್​ ಆಗಿಬಿಟ್ಟಿದ್ರು. ಆದ್ರೆ, ಇದೀಗ ಕಾಲಿವುಡ್​ಗೆ ಎಂಟ್ರಿ ಕೊಟ್ಟಿರೋ ನಾಗಶೇಖರ್ ನಾನುಮ್​​ ಅವಳುಮ್​ ಸಿನಿಮಾ ಡೈರೆಕ್ಟ್​ ಮಾಡ್ತಿದ್ದಾರೆ. ನಾಗಶೇಖರ್​ ಅವ್ರೇ ಸಿನಿಮಾದ ನಾಯಕನಾಗಿದ್ದು, ತಮ್ಮದೇ ಬ್ಯಾನರ್​​ನಲ್ಲಿ ನಿರ್ಮಾಣ ಕೂಡ ಮಾಡ್ತಿದ್ದಾರೆ.

ಇತ್ತೀಚೆಗೆ ಈ ಸಿನಿಮಾದ ಶೂಟಿಂಗ್ ನಡೀತಿದ್ದು, ಅಂತಿಮ ಹಂತದಲ್ಲಿದೆ. ಸುಮನ್​ ರಂಗನಾಥ್​ ಪೊಲೀಸ್ ಕಾಪ್​ ರೋಲ್​ನಲ್ಲಿ ಮಿಂಚ್ತಿದ್ದಾರೆ. ಜತೆಗೆ ನಾಗಶೇಖರ್​​ ಮಾಧ್ಯಮಗಳ ಜೊತೆ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪವರ್ ಟಿವಿ ಪ್ರತಿನಿಧಿಯ ನೇರ ಪ್ರಶ್ನೆಗಳಿಗೆ ನೇರವಾಗೇ ಉತ್ತರ ಕೊಟ್ಟ ನಾಗಶೇಖರ್​​​​, ಮಾಸ್ತಿಗುಡಿ ನಂತ್ರ ನನ್ನ ಅದೃಷ್ಠ ಚೇಂಜ್ ಆಗಿಲ್ಲ. ಅಂಬರೀಶ್​ ಕರೆದ್ರೆ ಇಡೀ ಇಂಡಿಯಾದಲ್ಲೆ ಫೇಮಸ್​ ಡೈರೆಕ್ಟರ್ಸ್​​​​ ಓಡೋಡಿ ಬರ್ತಾರೆ. ಅಂತದ್ರಲ್ಲಿ ಅವ್ರ ಮಗನ್ನ ನನ್​ ಕೈಲೇ ಲಾಂಚ್​ ಮಾಡಿಸಿದ್ರು. ನಾನ್​ ಸರಿಯಾಗಿ ಲಾಂಚ್​ ಮಾಡದೇ ಇದ್ದಿದ್ರೆ ಬೇರೆ ಸಿನಿಮಾಗಳು ಹುಡುಕಿಕೊಂಡು ಬರ್ತಾ ಇರಲಿಲ್ಲ ಅಂದ್ರು.

ಕನ್ನಡದ ಮೇಲೆ ಯಾಕಿಷ್ಟು ಕೋಪ. ತೆಲುಗು, ತಮಿಳಿನಲ್ಲಿ ಸಿನಿಮಾಗಳನ್ನ ಮಾಡ್ತಾ ಇದ್ದೀರಾ ಅನ್ನೋ ಪ್ರಶ್ನೆಗೆ ಕನ್ನಡದಲ್ಲಿ ನನ್ನ ಕಥೆ ಕೇಳಿಸಿಕೊಳ್ಳೊ ಕಿವಿಗಳಿಲ್ಲ ಎಂದ್ರು.

ಸಿನಿಮಾಗಳು ಸೋತ್ರು ಕುಗ್ಗಿಲ್ಲ, ಗೆದ್ರು ಹಿಗ್ಗಿಲ್ಲ. ಎಷ್ಟೋ ಮಂದಿ ನನ್ ಬಗ್ಗೆ ಕೆಟ್ಟದಾಗಿ ಆಡಿಕೊಂಡಿದ್ದಾರೆ. ಅವರು ನಾಚೋ ಹಾಗೆ ಸಿನಿಮಾ ಕೊಟ್ಟಿದ್ದೀನಿ. ಸದ್ಯ ಲವ್​ ಮಾಕ್ಟೇಲ್​ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್​​ ಮಾಡಿದ್ದೀನಿ. ಆ ಸಿನಿಮಾ ನೋಡಿದ್ರೆ  ನೀವೆ ಶಾಕ್​ ಆಗ್ತೀರಾ ಅಂದ್ರು.

ಮಳೆಗಾಲದಲ್ಲಿ ನಡಿಯೋ ಪ್ರೇಮಕಥೆಯ ಸಿನಿಮಾ ನಾನುಮ್​ ಅವಳುಮ್​. ನವೆಂಬರ್​ ಮಳೆಯಲ್ಲಿ ಸಿನಿಮಾ ರೀರೆಕಾರ್ಡಿಂಗ್​ ಇಲ್ಲದೇ ತಯಾರಾಗ್ತಿದೆಯಂತೆ. ಸೀಳು ತುಟಿಯ, ಗ್ಲಾಮರ್​ ಇಲ್ಲದ ನಟನಾಗಿ ನಟಿಸಿದ್ದೇನೆ. ಗ್ಲಾಮರ್​ ಲೆಸ್​​ ಜನರ ಪ್ರತಿನಿಧಿಯಾಗಿ ಈ ಸಿನಿಮಾ ಮಾಡಿದ್ದೇನೆ ಎಂದ್ರು.

ನಾನುಮ್​ ಅವಳುಮ್​ ಸಿನಿಮಾದಲ್ಲಿ ಮಲಯಾಳಂ ನಟಿ ಅನುಶ್ರೀ ತಾರಾ ನಟಿಸ್ತಾ ಇದ್ದಾರೆ. ರಂಗಾಯಣ ರಘು ACP ಸ್ಪೆಷಲ್​ ರೋಲ್​ ಮಾಡ್ತಾ ಇದ್ದಾರೆ. ದತ್ತಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಸಿನಿಮಾ ಕನ್ನಡದಲ್ಲೂ ಡಬ್​ ಆಗಲಿದೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕವಿರಲಿದೆ. 2022 ನವೆಂಬರ್​ 11ಕ್ಕೆ ಸಿನಿಮಾ ರಿಲೀಸ್​ ಆಗಲಿದ್ದು, ತಮಿಳಿನ ಸ್ಟಾರ್​ ನಟರು ಸಿನಿಮಾ ಕಥೆಯನ್ನು ಮೆಚ್ಚಿಕೊಂಡಿದ್ದಾರಂತೆ.  ಅಂತೂ ಕನ್ನಡ ತೊರೆದು ಪರಭಾಷೆಗಳಲ್ಲಿ ಮಿಂಚ್ತಾ ಇರೋ ನಾಗಶೇಖರ್​ ಕನ್ನಡದ ಮೇಲೆ ವಿಶೇಷ ಪ್ರೇಮ ಉಳಿಸಿಕೊಂಡಿದ್ದಾರೆ. ಎನಿವೇ ಪವರ್ ಟಿವಿ ಕಡೆಯಿಂದ ನಾಗಶೇಖರ್​ ಸಿನಿಮಾಗೆ ಆಲ್​ ದಿ ಬೆಸ್ಟ್.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES