Monday, December 23, 2024

ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

ಮೈಸೂರು : ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಕಲ ರೀತಿಯಲ್ಲೂ ಸಿದ್ಧವಾಗಿದೆ. ಜಂಬೂ ಸವಾರಿ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆ ಈಗಾಗಲೇ ಕಾಡಿನಿಂದ ನಾಡಿಗೆ ಬಂದಿದ್ದು, ಮೈಸೂರಿನಲ್ಲಿ ದಸರಾ ಗತವೈಭವದ ವಾತಾವರಣ ನಿರ್ಮಾಣವಾಗಿದೆ. ದಸರಾದಲ್ಲಿ ಚಿನ್ನದ ಅಂಬಾರಿ ಹೊರುವುದು ಅಂದರೆ ಅದು ಸಾಹಸದ ಕೆಲಸವೆ ಸರಿ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯುವಿಗೆ ಇಂದಿನಿಂದ ಮರಳಿನ ಮೂಟೆ ಹೊರೆಸಿ ತಾಲೀಮು ಆರಂಭಿಸಲಾಯಿತು. ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಅಭಿಮನ್ಯು ಮೇಲೆ ಇದ್ದ ಗಾದಿಯಲ್ಲಿ 300 ಕೆ.ಜಿ.ತೂಕದ ಮರಳಿನ ಮೂಟೆ ಹೊರೆಸಿ ತಾಲೀಮು ಆರಂಭಿಸಲಾಯಿತು.

ಅರಮನೆಯಂಗಳದಿಂದ ಹೊರಟ ಗಜಪಡೆ ತಾಲೀಮು ರಾಜ ಬೀದಿಗಳಲ್ಲಿ ಸಾಗಿತು. ಮರಳಿನ ಮೂಟೆ ಹೊತ್ತು ಸಾಗಿದ ಕ್ಯಾಪ್ಟನ್ ಅಭಿಮನ್ಯುವನ್ನ, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಚೈತ್ರ, ಕಾವೇರಿ ಆನೆಗಳು ಅಭಿಮನ್ಯು ಹಿಂಬಾಲಿಸಿದ್ವು. ಚಾಮರಾಜ ಒಡೆಯರ್ ಸರ್ಕಲ್, ಆಲ್ಬರ್ಟ್ ರೋಡ್, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್ ಮೂಲಕ ಬನ್ನಿಮಂಟಪ ತಲುಪಿ ಮತ್ತೆ ಮೈಸೂರು ಅರಮನೆಗೆ ವಾಪಸ್ಸಾದ್ವು. ಈ ವೇಳೆ ಆನೆಗಳಿಗೆ ಯಾವುದೇ ತೊಂದರೆ ಆಗದಂತೆ ಎಸ್ಕಾರ್ಟ್ ನೀಡಲಾಗಿತ್ತು. ಸಾಲಾಗಿ ಸಾಗಿದ ದಸರಾ ಗಜಪಡೆಯನ್ನ ರಸ್ತೆಗಳ ಬದಿಗಳಲ್ಲಿ ನಿಂತ ಜನ ಕಣ್ತುಂಬಿಕೊಂಡ್ರು.

ಒಟ್ಟಾರೆ, ಗಜಪಡೆಗೆ ದಿನ ಕಳೆದಂತೆ ಮರಳು ಮೂಟೆಗಳ ತೂಕ ಹೆಚ್ಚಿಸಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಗರಿಷ್ಠ 800 ಕೆ‌.ಜಿ. ತೂಕದ ವರೆಗೂ ಹೊರಿಸಲಾಗುತ್ತದೆ. ಮಾತ್ರವಲ್ಲದೆ ಇತರೆ ಆನೆಗಳಿಗೆ ಕೂಡ ತಾಲೀಮು ನಡೆಸಲಾಗುತ್ತದೆ. ನಂತರ ಜಂಬೂ ಸವಾರಿ ಮೆರವಣಿಯಲ್ಲಿ ಭಾಗಿಯಾಗಲು ಗಜಪಡೆ ಫಿಟ್ ಅಂಡ್ ಫೈನ್ ಆಗಲಿವೆ.

ಹರೀಶ್ ಜೊತೆ ಸುರೇಶ್ ಬಿ ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES