Wednesday, January 22, 2025

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ, ಖಂಡಿಸಿದ ಸಚಿವ ಮುನಿರತ್ನ

ಕೋಲಾರ: ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸದಿದ್ದು ತಪ್ಪು, ಯಾರೇ ಆಗಲಿ ಈ ರೀತಿ ಮಾಡುವುದು ತಪ್ಪು ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕರ್ನಾಟಕದ ರಾಜಕಾರಣ ಬಹಳ ಶಾಂತಿಯುತವಾದದ್ದು, ಸಿದ್ದರಾಮಯ್ಯನಂತಹ ಹಿರಿಯ ರಾಜಕಾರಣಿಗೆ ಮೊಟ್ಟೆ ಹೊಡೆಯುವುದು ತಪ್ಪು. ಕಾನೂನು ಅದರ ಕೆಲಸ ಮಾಡುತ್ತದೆ, ನಾವು ಶಾಂತಿಯುತವಾಗಿ ಜೀವನ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನೆಲ್ಲ ಪೊಲೀಸರ ವೈಫಲ್ಯ ಎಂದು ಹೇಳಲು ಆಗಲ್ಲ. ಮೊರೆಯಲ್ಲಿ ನಿಂತು ಕಲ್ಲು ಹೊಡೆಯುವುದು, ಮೊಟ್ಟೆ ಹೊಡೆಯುವುದನ್ನ ಮಾಡ್ತಾರೆ. ಮುಂದಿನ ದಿನಗಳಲ್ಲಿ ಅವರ ಪ್ರವಾಸದ ಪಟ್ಟಿ ನೀಡಿದಲ್ಲಿ ರಕ್ಷಣೆಯನ್ನು ಮಾಡುತ್ತೇವೆ ಎಂದರು.

ಇನ್ನು ಆಗಸ್ಟ್ 26ಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾದರೆ, ಕೋಳಿ ಮೊಟ್ಟೆ ಇವರೇ ಹೊಡೆಸಿರಬಹುದು. ನಮ್ಮ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡೋದಿಕ್ಕೆ ಇವರಿಗೆ ವಿಚಾರಗಳೇ ಇಲ್ಲ. ಅದಕ್ಕಾಗಿ ಮೊಟ್ಟೆ ವಿಚಾರ ಎತ್ತಿಕೊಳ್ಳಬಹುದು.

ಸದ್ಯ ಕಾಂಗ್ರೆಸ್ ನಲ್ಲಿ‌ ಸಿಎಂ‌ ಕುರ್ಚಿಗೆ ಕಿತ್ತಾಟ ನಡೆದಿದೆ. ಕುಮಾರಸ್ವಾಮಿಯವರೇ ಡಿಕೆಶಿಗೆ ಮುಂದಿನ‌ ಮುಖ್ಯಮಂತ್ರಿ‌ ಎಂದು ಹೇಳಿದ್ದಾರೆ. 2023ಕ್ಕೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES