Sunday, December 22, 2024

ನಾವು ತಪ್ಪು ಮಾಡಿದರೆ ತಿದ್ದುವ ಪ್ರಯತ್ನ ಮಾಡಬೇಕು : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ : ಅಧಿಕಾರದ ಆಸೆಗೆ ಪಾಕಿಸ್ತಾನ, ಹಿಂದುಸ್ಥಾನವನ್ನು ಕೆಲವು ಕಾಂಗ್ರೆಸ್ ನಾಯಕರು ಮಾಡಿದ್ರು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮ ಮಾಡಿದ್ವಿ. ಅವರಿಬ್ಬರು ಮಲಗಿದ್ದರು. ಪಾಪ ಈಗ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತಾ ಬಡಿದಾಡುತ್ತಿದ್ದಾರೆ ಎಂದರು.

ಇನ್ನು, ಚಿತ್ರದುರ್ಗದಲ್ಲಿ ಜಾತಿ ಸಮಾವೇಶದಲ್ಲೂ ಇಬ್ಬರು ಬಡಿದಾಡಿದ್ದಾರೆ. ಡಿಕೆಶಿ ನಾನು ಮುಖ್ಯಮಂತ್ರಿ, ಹೆಚ್ ಡಿಕೆ ನಾನು ಮುಖ್ಯಮಂತ್ರಿ ಅಂತಾ. ಅವರ ಸ್ವಾಮಿಗಳು ಹೇಳ್ತಾರೆ ಇವರಿಬ್ಬರಲ್ಲಿ ಯಾರಾದ್ರೂ ಮುಖ್ಯಮಂತ್ರಿ ಆಗಿ ಅಂತಾರೆ. ಸಿದ್ದರಾಮಯ್ಯ ತಾನು ಬಿಟ್ಟರೇ, ಪ್ರಪಂಚದಲ್ಲಿ ಮುಖ್ಯಮಂತ್ರಿ ಆಗೋರು ಇಲ್ಲವೇ ಇಲ್ಲ ಅಂತಾರೆ.ಅಧಿಕಾರದ ಆಸೆಗೆ ಈ ದೇಶ ತುಂಡಾಯ್ತು ಎಂದು ಹೇಳಿದರು.

ಅದಲ್ಲದೇ, ಹಿಂದುಸ್ಥಾನ, ಪಾಕಿಸ್ತಾನ ಆಗಿದ್ದು ಬೇರೆ ಇನ್ನು ಯಾವ ಕಾರಣಕ್ಕೂ ಅಲ್ಲ. ಇಡೀ ಹಿಂದುಸ್ಥಾನ ಒಟ್ಟಾಗಿ ಇರಬೇಕು ಅಂತಾ ಅನೇಕ‌ ಮಹಾಪುರುಷರು ಹೋರಾಟ ಮಾಡಿದ್ರು. ಅಧಿಕಾರದ ಆಸೆಗೆ ಪಾಕಿಸ್ತಾನ, ಹಿಂದುಸ್ಥಾನವನ್ನು ಕೆಲವು ಕಾಂಗ್ರೆಸ್ ನಾಯಕರು ಮಾಡಿದ್ರು. ಅಖಂಡ ಭಾರತ ಇರಬೇಕು ಅಂತಾ ಕೆಲವು ನಾಯಕರು ಹೋರಾಡಿ‌ ಸ್ವರ್ಗಸ್ಥರಾದರು. ಇವರು ಇದೀಗ ಅದನ್ನೇ ಮುಂದುವರಿಸುತ್ತಿದ್ದಾರೆ ಎಂದರು.

RELATED ARTICLES

Related Articles

TRENDING ARTICLES