Monday, December 23, 2024

ಭಜರಂಗದಳ ಕಾರ್ಯಕರ್ತರಿಗೆ ಥಳಿಸಿ ಬಂಧನ ಮಾಡಿದ ಪೊಲೀಸರು.!

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಭಾವುಟ ಪ್ರದರ್ಶಿಸಲು ಬಂದಿದ್ದ 7 ಕ್ಕೂ ಹೆಚ್ಚು ಭಜರಂಗದಳದ ಕಾರ್ಯಕರ್ತರನ್ನು ಶೃಂಗೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ಕಾರ್ಯಕರ್ತರು ಬಂದಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಭಜರಂಗದಳದ ಕಾರ್ಯಕರ್ತರಿಗೆ ಥಳಿಸಿ ತಮ್ಮ ಜೀಪಿಗೆ ತುಂಬಿಸಿದ್ದಾರೆ.

ಈ ಘಟನೆಯಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಪೊಲೀಸರು ಆಕ್ರೋಶ ವ್ಯಕ್ತಿಪಡಿಸಿ ವಿಡಿಯೋ ಚಿತ್ರೀಕರಣ ಮಾಡಬೇಡಿ ಎಂದು ತಾಕೀತು ನೀಡಿದರು.

RELATED ARTICLES

Related Articles

TRENDING ARTICLES