Monday, December 23, 2024

‘ಗಾಳಿಪಟ’ ಹಾರಾಟಕ್ಕೆ ಬಾಕ್ಸ್ ಆಫೀಸ್ ಧೂಳಿಪಟ..!

ಭಟ್ರ ಗಾಳಿಪಟ ಮುಗಿಲೆತ್ತರಕ್ಕೆ ಹಾರಿ ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲಿ ಚಿಂದಿ ಉಡಾಯಿಸಿದೆ. ಮೊದಲ ವಾರದಲ್ಲೇ ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ನಿರೀಕ್ಷೆಗೂ ಮೀರಿ ಸಕ್ಸಸ್​ ಕಂಡಿರುವ ಗೋಲ್ಡನ್​​​ ಗ್ಯಾಂಗ್​​ ತರಲೆ ತಮಾಷೆ, ಚೇಷ್ಟೆಗೆ ಪ್ರೇಕ್ಷಕ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾನೆ. ಭಟ್ರ ಇಡೀ ತಂಡ ಸಕ್ಸಸ್​ ಗುಂಗಿನಲ್ಲಿದ್ದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಹೇಗಿತ್ತು ಗಣಿ ಗ್ಯಾಂಗ್​​ ಸಕ್ಸಸ್​ ಸಂಭ್ರಮ..? ನೀವೇ ಓದಿ.

  • ಗಣೇಶೋತ್ಸವದಲ್ಲಿ ಅನಂತ್, ಶ್ರೀನಾಥ್, ಕಾಯ್ಕಿಣಿ..!

ಯೋಗರಾಜ ಭಟ್ರ ಕ್ಯಾಚಿ ಸಂಭಾಷಣೆ, ಲೇಜಿ ಕಥೆಯೊಳಗೆ ಸೀರಿಯಸ್​ ಸಂದೇಶ ಕೊಡುವ ಚಾಣಾಕ್ಷತನಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ. ರಿಲೀಸ್​ ಆದ ಎಲ್ಲಾ ಥಿಯೇಟರ್​ಗಳಲ್ಲೂ ಭರ್ಜರಿ ಪ್ರದರ್ಶನ ಕಾಣ್ತಿರೋ ಗಾಳಿಪಟ -2 ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಗ್ತಾ ಇದ್ದು, ಬಾಕ್ಸ್​ ಆಫೀಸ್​ ಲೂಟಿ ಮಾಡಿದೆ. ಇಡೀ ಸಿನಿಮಾ ತಂಡ ಫುಲ್​ ಖುಷ್​ ಆಗಿದ್ದು, ನಿರ್ಮಾಪಕರು ಹ್ಯಾಪಿ ಮೂಡ್​​ನಲ್ಲಿದ್ದಾರೆ. ಈ ಸಂತಸವನ್ನು ಹಂಚಿಕೊಳ್ಳಲು ಇಡೀ ಸಿನಿಮಾ ಟೀಮ್​ ಸಕ್ಸಸ್​​ ಪಾರ್ಟಿ ಮಾಡಿದೆ. ಅನಂತ್​ ನಾಗ್​​, ಶ್ರೀನಾಥ್​​, ಜಯಂತ್​ ಕಾಯ್ಕಿಣಿ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾ ಫಸ್ಟ್​​ ಡೇ ರೆಸ್ಪಾನ್ಸ್ ನೋಡಿ ದಿಲ್​ ಖುಷ್​ ಆಗಿದ್ದ ಯೋಗರಾಜ್​ ಭಟ್​ ಗೆಲುವಿನ ಲಯಕ್ಕೆ ಮರಳಿದ್ರು. ಫ್ಯಾನ್ಸ್​​ ಜತೆ ಹುಚ್ಚೆದ್ದು ಕುಣಿದು ತಮಟೆ ಬಾರಿಸಿ ಖುಷಿ ಪಟ್ಟಿದ್ರು. ಇದ್ರ ಜತೆಯಲ್ಲಿ ಸಿನಿಮಾ ನೋಡಿದ್ದ ಪ್ರೇಕ್ಷಕರು ಭಟ್ರ ಕೆನ್ನೆಗೆ ಮುತ್ತಿಕ್ಕಿ ಲವ್​ ಯು ಬಾಸ್​ ಎಂದಿದ್ರು. ಸಿನಿಮಾ ಪೂರ್ತಿ ಗಣಿ ಗ್ಯಾಂಗ್​​ ಸಿಕ್ಕಾಪಟ್ಟೆ ನಕ್ಕು ನಗಿಸಿದೆ. ನನಗೇನು ಹೇಳಬೇಕು ತೋಚುತ್ತಿಲ್ಲ. ಇದು ಜನರ ಸಿನಿಮಾ. ನನ್ನ ಸರಿ ದಾರಿಗೆ ತಂದಿದ್ದು ಅನಂತ್​ ಸರ್​ ಎಂದು ಭಟ್ರು ಅಭಿಪ್ರಾಯ ಪಟ್ರು.

ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಪೋರ್ಟ್​ ಮಾಡಿದ ಪ್ರತಿಯೊಬ್ಬರಿಗೂ ನಮಸ್ಕಾರ. ಪವನ್​ ಡೈವಿಂಗ್​ ಸ್ಟಾರ್​​ ಆಗ್ಬಿಟ್ರು. ಕಥೆ ಏನು ಅಂತಾ ನಂಗೆ ತಲೆ ಕೆಟ್ಟಿತ್ತು. ರಿಯಲ್​​ ಕಥೆ ಬೇರೇನೇ ಇತ್ತು. ಲಿಪ್​ ಲಾಕ್​​ ಕೊಟ್ಟ ಅಭಿಮಾನಿ ಬದುಕಿದಾನೋ ಇಲ್ವೋ ಗೊತ್ತಿಲ್ಲ ಎಂದು ಗಣೇಶ್​ ಎಲ್ರನ್ನು ನಕ್ಕು ನಗಿಸಿದ್ರು.

ಸಿನಿಮಾದಲ್ಲಿ ಪ್ರತಿ ಹಾಡುಗಳು ಎಲ್ಲರ ಹೃದಯವನ್ನು ತಬ್ಬಿಕೊಂಡಿವೆ. ಈ ಸಕ್ಸಸ್​ ಪಾರ್ಟಿಯಲ್ಲಿ ಕೇಂದ್ರಬಿಂದುವಾಗಿದ್ದ ಸಾಹಿತಿ ಜಯಂತ್ ಕಾಯ್ಕಿಣಿ ಮಾತನಾಡಿ, ಭಟ್ರ ಸಿನಿಮಾ ಸಾಮೂಹಿಕ ವಿವಾಹ ಇದ್ದ ಹಾಗೆ. ಈ ಸಿನಿಮಾದಲ್ಲಿ ಅದ್ಭುತ ಹದವಿದೆ ಎಂದು ತಮ್ಮದೇ ಶೈಲಿಯಲ್ಲಿ ಹೊಗಳಿದ್ರು.

ಸಿನಿಮಾದಲ್ಲಿ ಕಾಲೇಜು ಪ್ರಾಂಶುಪಾಲರಾಗಿ ಅಭಿನಯಿಸಿರುವ ಶ್ರೀನಾಥ್​​ ಬಹುದಿನಗಳ ನಂತ್ರ ಸಿಲ್ವರ್​ ಸ್ಕ್ರೀನ್​​ ಮೇಲೆ ಮಿಂಚಿದ್ದಾರೆ. ನಂಗೆ ಭಟ್ರು ಗುರುಗಳಿದ್ದಂತೆ. ಅನಂತ್​ನಾಗ್​ ಜತೆ ಸ್ಕ್ರೀನ್​ ಮೇಲೆ ನಟಿಸೋ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್​ ಯು. ಗಣಿ ನಿಮ್ಮ ಮೇಲೆ ಕಥೆ ಮಾಡಬೇಕು ಅಂತಾನೆ ಯಾವಾಗ ಮಾಡ್ತಿಯಪ್ಪಾ ಅಂತಾ ಕಾಲೆಳೆದ್ರು.

ನೀರು ಕೋಟೆ ಕನ್ನಡ ಮೇಷ್ಟ್ರಾಗಿ ಸಿನಿಮಾ ಪೂರ್ತಿ ಎಲ್ಲರ ಅಟೆನ್ಷನ್​ ಸೆಳೆದ ಪ್ರತಿಭಾನ್ವಿತ ಹಿರಿಯ ಕಲಾವಿದ ಅನಂತ್​ನಾಗ್​ ಕೂಡ ಮೆಚ್ಚುಗೆಯ ಸುರಿಮಳೆಗೈದ್ರು. ರಂಗಾಯಣ ರಘು ಟೆರ್ರಿಫಿಕ್​ ಆ್ಯಕ್ಟರ್​​​. ಗಣಿ ನಾನು ಇಬ್ಬರೂ ನ್ಯಾಚುರಲ್​ ಆ್ಯಕ್ಟರ್ಸ್​​​​. ಅವನು ಎದುರಿಗೆ ಇದ್ರೆ ನಾನು ಇನ್ನೂ ಚೆನ್ನಾಗಿ ನಟಿಸ್ತೀನಿ ಅಂದ್ರು.

ನಂಗೆ ಈ ಸಿನಿಮಾ ಸೂಪರ್​​​. ನನ್ ಫ್ರೆಂಡ್​ ಕಾಲ್​ ಮಾಡಿ ಭಟ್ರ ತಲೇಲಿ ಈ ತರಹದ ಕಥೆ ಹೇಗೆ ಬರುತ್ತೆ ಅಂದ್ರು. ರಮೇಶ್​ ರೆಡ್ಡಿ ಫಸ್ಟ್​ ಱಂಕ್​ ಬಂದಿದ್ದಾರೆ. ಭಟ್ರು ದಿಗ್ಗಿ ಬಟ್ಟೆ ಎಲ್ಲಾ ಬಿಚ್ಚಾಕಿಬಿಟ್ಟಿದ್ದಾರೆ. ಗಣಪ ಇಂಟೆನ್ಸಿವ್​ ಆ್ಯಕ್ಟರ್​​. ಎಲ್ಲರನ್ನು ನುಂಗಿ ಹಾಕಿಬಿಡ್ತಾನೆ ಎಂದು ರಂಗಾಯಣ ರಘು, ಗಣೇಶ್​ನ ಹಾಡಿ ಕೊಂಡಾಡಿದ್ರು.

ಸಿನಿಮಾ ನಿರ್ಮಾಪಕರು ಸಿನಿಮಾದ ಎಲ್ಲಾ ಕಲಾವಿದರನ್ನು ನೆನಪು ಮಾಡಿಕೊಂಡು ಕೃತಜ್ನತೆ ಸಲ್ಲಿಸಿದ್ರು. ಕೊನೆಯಲ್ಲಿ ಮರೆಯದೇ ನಾನು ಈಗ ಪಾಸಾಗಿದ್ದೀನಿ ಅನ್ನೋದನ್ನ ಮರೆಯಲಿಲ್ಲ.

ಕರ್ನಾಟಕ ಸಂಸ್ಕೃತಿನಾ ಹೊರಗಡೆ ತುಂಬಾ ಇಷ್ಟ ಪಡ್ತಾರೆ. ಭಟ್ರಿಗೆ ಹಾಗೂ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸ್ತೇನೆ ಎಂದು ವೈಭವಿ ಶಾಂಡಿಲ್ಯ ಕರ್ನಾಟಕವನ್ನು ಮೆಚ್ಚಿಕೊಂಡ್ರು.

ಡೈವಿಂಗ್​ ಕ್ವೀನ್​ ಆಗಿ ಮಿಂಚಿದ ಶರ್ಮಿಳಾ ಮಾಂಡ್ರೆ ಟೀಚರ್​ ರೋಲ್​​​ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದಾರೆ. ಗಣಿ ಜತೆ ಸಿನಿಮಾ ಮಾಡಿದ್ರೆ ದೊಡ್ಡ ಹಿಟ್ ಆಗುತ್ತೆ. ಪವನ್​ಗೆ ಟೀಚರ್​ ಆಗಿ ನಾನು ಸಿಕ್ಕಿದ್ದೇ ಲಕ್ಕಿ ಎಂದು ಪವನ್​ ಕಾಲೆಳೆದ್ರು.

ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ ಗಾಳಿಪಟ-2 ಪ್ರದರ್ಶನ ಕಂಡಿದೆ. ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಟ-2 ಎರಡನೇ ದಿನವೂ  10 ಕೋಟಿ ಕಲೆಕ್ಷನ್​ ಮಾಡಿದ್ದು,  ಮೂರನೇ ದಿನ 5 ಕೋಟಿ ಕಲೆಕ್ಷನ್​ ಗಳಿಸಿದೆ. 4ನೇ ದಿನ 5 ಕೋಟಿ ಕಲೆಕ್ಷನ್ ಆಗಿದೆ.  5ನೇ ದಿನ 2 ಕೋಟಿ ದಾಟಿದ್ದು, ಒಟ್ಟು ಚಿತ್ರದ ಕಲೆಕ್ಷನ್​  37 ಕೋಟಿ ದಾಟಿದೆ ಎಂದು ಮೂಲಗಳು ತಿಳಿಸಿವೆ.   ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿ ಕರಿಯರ್‌ನಲ್ಲಿ ಇದು ಸೂಪರ್​ ಡೂಪರ್ ಹಿಟ್​ ಸಿನಿಮಾವಾಗಿದ್ದು, ಇನ್ನೂ ಬಾಕ್ಸ್ಆಫೀಸ್​ ಧೂಳೆಬ್ಬಿಸೋ ಲಕ್ಷಣಗಳು ಕಾಣಿಸ್ತಿವೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES