Wednesday, January 22, 2025

RSS ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ: ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

ಚಿಕ್ಕಮಗಳೂರು: ಇಲ್ಲಿನ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಜಗದ್ಗುರು ವಿಧುಶೇಖರ ಅವರ ದರ್ಶನವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ, ಆರ್.ಎಸ್.ಎಸ್ ರವರ ಗೊಡ್ಡು ಬೆದರಿಕೆಗೆ  ನಾನು ಬೆದರುವುದಿಲ್ಲ. ನಮ್ಮ ಪಕ್ಷದಲ್ಲೂ ಕಾರ್ಯಕರ್ತ ರಿದ್ದಾರೆ. ಬಿಜೆಪಿಯಲ್ಲಿ ಮಾತ್ರನಾ ಕಾರ್ಯಕರ್ತರಿರೋದಾ ಎಂದು ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಬಗ್ಗೆ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿಗೆ ಮಾತ್ರ ರಾಜಕೀಯ ಮಾಡೋಕೆ ಬರೋದು. ಇದಕ್ಕೆಲ್ಲಾ ಹೆದರುವುದಿಲ್ಲ. ಈ ರೀತಿ ಮಾಡುವುದು ಸಹಜ. ಬಿಜೆಪಿ, ಆರ್.ಎಸ್.ಎಸ್ ನವರ ಬೆದರಿಕೆಗೆ ಎದುರೋಕೆ ಆಗುತ್ತಾ. ಸತ್ಯ ಹೇಳಿದ್ರೆ ಮೈ ಪರೆಚುಕೊಳ್ತಿದ್ದಾರೆ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES