ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಇವತ್ತು ಎಲ್ಲೆಡೆ ಆಚರಿಸಲಾಯಿತು. ರಾಜಾಜಿನಗರ ಇಸ್ಕಾನ್ ದೇವಾಲಯ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಪ್ರತಿ ವರ್ಷದಂತೆ ಈ ಭಾರಿಯೂ ಇಸ್ಕಾನ್ ದೇವಾಲಯ ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಣೆ ಮಾಡಿತು.
ಸುಮಾರು ಒಂದು ಲಕ್ಷ ಲಡ್ಡು ಹಾಗೂ 10 ಟನ್ ಸಕ್ಕರೆ ಪೊಂಗಲ್ ಅನ್ನು ಪ್ರಸಾದವಾಗಿ ನೀಡಲಾಗಿದೆ. ಇಂದು ಬೆಳಿಗ್ಗೆಯಿಂದಲೇ ಬರುವ ಭಕ್ತರಿಗೆ ಯಾವುದೇ ಆಡಚಣೆ ಆಗದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. 1 ಲಕ್ಷ ಜನ ದೇವರ ದರ್ಶನ ಪಡೆಯುವುದರಿಂದ ಭಕ್ತರಿಗೆ ಸರದಿ ಸಾಲಿನಲ್ಲಿ ಬರಲು ಬ್ಯಾರಿಕೇಡ್ ವ್ಯವಸ್ಥೆ ಮಾಡಿದರು.
ಇಂದು ಬೆಳಿಗ್ಗೆ 4:30ಕ್ಕೆ ಮಂಗಳಾರತಿ, ತುಳಸಿ ಆರತಿ ನಡೆಸಿ. ಬಳಿಕ 7:15ಕ್ಕೆ ದರ್ಶನ ಆರತಿ, 8:45ಕ್ಕೆ ರಾಧಾ ಕೃಷ್ಣರ ಉಯ್ಯಾಲೆ ಸೇವೆ, 11ಕ್ಕೆ ರಾಧಾಕೃಷ್ಣ ಉತ್ಸವ ಮೂರ್ತಿಗೆ ಮೊದಲ ಅಭಿಷೇಕ, ಮಧ್ಯಾಹ್ನ 12ಕ್ಕೆ ರಾಜಭೋಗ್ ನೈವೇದ್ಯ, ಸಂಜೆ 5 ಕ್ಕೆ ರಾಧಾಕೃಷ್ಣ ಉತ್ಸವಮೂರ್ತಿಗೆ ಎರಡನೇ ಅಭಿಷೇಕ, ರಾತ್ರಿ 8:30 ಕ್ಕೆ ಮೂರನೇ ಅಭಿಷೇಕ ನಡೆಸಿ. ಬಳಿಕ 10:30ಕ್ಕೆ ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ರಾಧಾಕೃಷ್ಣರ ಪಂಚಗವ್ಯ, ಪಂಚಮೃತ, ಫಲೋದಕ, ಔಷಧಿ ಸ್ನಾನ, ಮಂತ್ರಪುಷ್ಪ ಸೇವಾ ಮತ್ತು ಅಷ್ಟಾವಧಾನ ಸೇವೆಗಳನ್ನು ನಡೆಸಿದ್ದಾರೆ.
ಅಂತೆಯೇ, ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಹಬ್ಬದ ಹಿನ್ನೆಲೆ ಮೇಳವನ್ನು ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಕಂಚಿನ ಕೃಷ್ಣನ ಮೂರ್ತಿಗಳು ಹಾಗೂ ಮಣ್ಣಿನಿಂದ ತಯಾರಿಸಿದ ಕೃಷ್ಣನ ವಿಗ್ರಹಗಳು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟೆ ಅಲ್ಲ ಈ ಮೇಳದಲ್ಲಿ ಅಲಂಕಾರಿಕ ವಸ್ತುಗಳು ಬಟ್ಟೆ ಸೇರಿದಂತೆ ಹಲವು ಸಾಮಗ್ರಿಗಳು ಸಿಗಲಿವೆ. ಇಂದಿನಿಂದ ಮುಂದಿನ 10 ದಿನಗಳು ಈ ಮೇಳ ನಡೆಯಲಿದ್ದು ನಟಿ ವೈಷ್ಣವಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಾತಿ ಪುಲಗಂಟಿ, ಮೆಟ್ರೋ ಬ್ಯುರೋ ಬೆಂಗಳೂರು