Monday, December 23, 2024

ಮೊಟ್ಟೆ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ.!

ಬೆಂಗಳೂರು: ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಬಗ್ಗೆ ಸಿದ್ದರಾಮಯ್ಯ ಅವರ ಜತೆಗೆ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಮಾತನಾಡಿದ ಸಿಎಂ, ಅವರಿಗೆ ಜೀವ ಬೆದರಿಕೆ ಇದೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಬಂತು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಪಕ್ಷ ನಾಯಕರಿಗೆ ಎಲ್ಲ ರೀತಿಯ ಭದ್ರತೆ ಕೊಡ್ತೇವೆ. ನಾನು ನೇರವಾಗಿ ಸಿದ್ದರಾಮಯ್ಯ ಜತೆಗೆ ಮಾತಾಡಿದೆ ಎಂದರು.

ನಿಮಗೆ ಯಾರಿಂದಾದರೂ ಬೆದರಿಕೆ ಕರೆ ಬಂದಿದೆಯಾ ಅಂತ ಸಿದ್ದರಾಮಯ್ಯ ಅವರನ್ನು ವಿಚಾರಿಸಿದೆ. ವಿರೋಧ ಪಕ್ಷದ ನಾಯಕರಿಗೆ ಸೂಕ್ತ ಭದ್ರತೆ ಕೊಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇವತ್ತು ಡಿಜಿಪಿಯವರನ್ನು ಕರೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಡಿಜಿಪಿಗೆ ಸೂಚಿಸಿದ್ದೇನೆ.

ಇನ್ನು ಸಿದ್ದರಾಮಯ್ಯ ಅವರ ಪ್ರತ್ಯೇಕ ಲಿಂಗಾಯತ ಪಶ್ಚಾತಾಪದ ಮಾತು ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಈ ಬಗ್ಗೆ ನಾನು ನಾಳೆ ಮಾತನಾಡ್ತೀನಿ ಎಂದರು.

RELATED ARTICLES

Related Articles

TRENDING ARTICLES