Tuesday, December 24, 2024

ಲವ್ವರ್​​ಗಾಗಿ ಪತಿಯನ್ನೇ ಮುಗಿಸೋಕೆ ಮುಂದಾದ ಪತ್ನಿ

ಬೆಂಗಳೂರು : ಲವ್ವರ್​​​ಗಾಗಿ ಪತಿಯನ್ನೇ ಮುಗಿಸೋಕೆ ಮುಂದಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಜುಲೈ 26 ನೇ ತಾರೀಕು ಅನುಪಲ್ಲವಿ ತನ್ನ ಪತಿ ನವೀನ್ ಕುಮಾರ್ ನನ್ನ ಕಿಡ್ನಾಪ್ ಮಾಡಿಸಿದ್ದಳು. ಪ್ರಿಯಕರ ಹಿಮಂತನ ಜತೆ ಸೇರಿ ಕಿಡ್ನಾಪ್ ಆಂಡ್ ಮರ್ಡರ್ ಗೆ ಸುಪಾರಿಕೊಟ್ಟಿದ್ದ ಅನುಪಲ್ಲವಿ. ಅದರಂತೆ ಆರೋಪಿಗಳಾದ ಹರೀಶ್ ಹಾಗೂ ನಾಗರಾಜ್ ನವೀನ್ ನನ್ನ ಕಿಡ್ನಾಪ್ ಮಾಡಿದ್ದರು.

ನವೀನನನ್ನ ಮರ್ಡರ್ ಮಾಡೋಕೆ ನಾಗರಾಜ್ ತಮಿಳುನಾಡಿನ ಮುಗಿಲನ್ ಹಾಗೂ ಕಣ್ಣನ್ ಎಂಬವರನ್ನ ಕರೆಸಿಕೊಂಡಿದ್ದರು. ಹಂತಕರು ನವೀನನನ್ನ ಕೊಲೆ ಮಾಡೋಕೆ ಹೆದರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ನವೀನನಿಗೆ ಕಂಠಪೂರ್ತಿ ಕುಡಿಸಿ ಮೈಮೇಲೆ ಸಾಸ್ ಚೆಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅದೇ ಫೋಟೊವನ್ನ ಸುಪಾರಿ ನೀಡಿದ್ದ ಹಿಮಂತನಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದರು. ಸುಪಾರಿ ಕೊಟ್ಟಿದ್ದ ಹಿಮಂತ ಫೋಟೋ ನೋಡಿ ಹೆದರಿ ಸುಸೈಡ್ ಮಾಡಿಕೊಂಡಿದ್ದ. ಹೀಗಾಗಿ ಹಿಮಂತ ಸುಸೈಡ್ ಮಾಡಿಕೊಂಡ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು.

ಇನ್ನು, ಪ್ರಕರಣವನ್ನ ಕೈಗೆತ್ತಿಕೊಂಡ ಪೀಣ್ಯ ಇನ್ಸ್ ಪೆಕ್ಟರ್ ಧರ್ಮೆಂದ್ರ. ನವೀನ್ ಕುಮಾರ ಮಿಸ್ ಆದ ಬಗ್ಗೆ ಕಂಪ್ಲೆಂಟ್ ಪೀಣ್ಯದಲ್ಲಿ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸ್ರು ಇದೀಗ ನವೀನ್ ಕುಮಾರನ ಪತ್ನಿ ಸೇರಿ ಐವರನ್ನ ಬಂಧಿಸಿದ್ದಾರೆ. ಸದ್ಯ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES