Wednesday, January 22, 2025

ಈ ವರ್ಷ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಇಲ್ಲ

ಬೆಂಗಳೂರು : ಈ ವರ್ಷ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಕೊವಿಡ್‌ ನಿರ್ವಹಣಾ ತಜ್ಞರು ಬಹುತೇಕ ಗ್ರೀನ್‌ಸಿಗ್ನಲ್‌ ನೀಡಿದ್ದಾರೆ.

ನಗರದಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಹಿಂದೂ ಕಾರ್ಯಕರ್ತರು ಸಜ್ಜಾಗಿದ್ದು, 2 ವರ್ಷದ ಬಳಿಕ ಅದ್ಧೂರಿ ಗಣೇಶೋತ್ಸವನ್ನ ಆಚರಿಸುತ್ತಿದ್ದಾರೆ. ನಗರದಲ್ಲಿ ಯಾವೆಲ್ಲಾ ನಿಯಮಗಳಿರಬಹುದು? ಎಷ್ಟು ಕಡೆ ಗಣೇಶನ ಮೂರ್ತಿಗಳನ್ನ ಕೂರಿಸಬಹುದು? ಸಾರ್ವಜನಿಕ ಸ್ಥಳಗಳಲ್ಲಿ 5 ರಿಂದ 9 ದಿನಕ್ಕೆ ಗಣೇಶೋತ್ಸವ ಸೀಮಿತವಾಗಿದೆ.

ಇನ್ನು, ಗಣೇಶನ ಮೂರ್ತಿಗಳ ವಿಸರ್ಜನೆ ವೇಳೆ DJ ಕಂಪ್ಲೀಟ್‌ ಬಂದ್‌ ಮಾಡಿದ್ದು, ಗಣೇಶ ಹಬ್ಬದ ದಿನದಂದು ಅನ್ನದಾಸೋಹ, ಪ್ರಸಾದ ವಿತರಣೆ ಮಾಡಲಾಗುತ್ತಿದ್ದು, ಉತ್ಸವದ ವೇಳೆ ಎಷ್ಟು ಮಂದಿ ಬೇಕಾದರೂ ಸೇರಬಹುದು. ಹಾಗೆನೇ ಗಣೇಶ ವಿಸರ್ಜನೆ ವೇಳೆ ಬೃಹತ್‌ ಮೆರವಣಿಗೆಗೂ ಅವಕಾಶವನ್ನು ನೀಡಲಾಗಿದೆ.

ಅದಲ್ಲದೇ, ಉತ್ಸವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಗ್ರೀನ್‌ ಸಿಗ್ನಲ್‌ ನೀಡಲಾಗಿದ್ದು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಕೂರಿಸುವಂತಿಲ್ಲ. ರಾಸಾಯನಿಕ ಮಿಶ್ರಿತ ಬಣ್ಣ ಬಳಸುವಂತಿಲ್ಲ. ವಾರ್ಡ್‌, ಗ್ರಾಮಕ್ಕೊಂದೇ ಗಣೇಶ ನಿಯಮ ಇಲ್ಲ.

RELATED ARTICLES

Related Articles

TRENDING ARTICLES