Wednesday, January 22, 2025

ಸಾಮಾಜಿಕ ಜಾಲತಾಣ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳಿಂದ ಅಭಿಮಾನದ ಕರೆ‌.!

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಕೊಡಗು ಜಿಲ್ಲೆಗೆ ಪ್ರವಾಸ ನೀಡುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಬದಲು ಅತಿರೇಕದಲ್ಲಿ ಸಿದ್ದರಾಮಯ್ಯನವರ ಕಾರು ಮೇಲೆ ಮೊಟ್ಟೆ ಎಸೆದಿರುವುದು ಸಿದ್ದರಾಮಯ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ಆಗಸ್ಟ್ 26 ಕ್ಕೆ ಮಡಿಕೇರಿ ಚಲೋ ಹಿನ್ನಲೆಯಲ್ಲಿ ಅಂದು ಸಿದ್ದರಾಮಯ್ಯ ಅಭಿಮಾನಿಗಳಿಂದ ಅಭಿಮಾನದ ಕರೆ‌ ನೀಡಲಾಗಿದೆ. ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸಿದಂತೆ ಅದೇ ರೀತಿ ಈ ಮಡಿಕೇರಿ ಚಲೋಗೆ ಸಿದ್ದರಾಮಯ್ಯ ಅಭಿಮಾನಿಗಳು ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಕರೆ ನೀಡುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಅಪಾರ ಜನಸ್ತೋಮ ಸೇರಿಸಲು ಕೈ ಪಡೆ ರೂಪುರೇಷೆ ನಡೆಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರು ಅತೀ ಹೆಚ್ಚು ಪ್ರಾಬಲ್ಯವಾಗಿದ್ದು, ಬಿಜೆಪಿಗೆ ಈ ಪ್ರತಿಭಟನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಿದ್ದರಾಮೋತ್ಸವದಂತೆ ಮತ್ತೆ ಜನ ಬೆಂಬಲದೊಂದಿಗೆ ಗುಡುಗಲು ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಗಸ್ಟ್ 26 ಕ್ಕೆ ಕೊಡಗಿಗೆ ಸಾವಿರಾರು ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣ ಮೂಲಕ ಕರೆ ನೀಡಿ ಲಗ್ಗೆ ಇಡಲು ಸಜ್ಜಾಗುತ್ತಿದ್ದಾರೆ.

RELATED ARTICLES

Related Articles

TRENDING ARTICLES