Monday, December 23, 2024

ಕಡಲ ತೀರದಲ್ಲಿ AK 47 ಗನ್’ಗಳು​ ಪತ್ತೆ, ರಾಯಗಡ ಜಿಲ್ಲೆಯಲ್ಲಿ ‘ಹೈ ಅಲರ್ಟ್’ ಘೋಷಣೆ.!

ಮಹಾರಾಷ್ಟ್ರ: ಮಹಾರಾಷ್ಟ್ರದ ರಾಯಗಡದ ಕಡಲ ತೀರದಲ್ಲಿ ಅನಾಮಧೇಯ ಸ್ಪೀಡ್​ ಬೋಟ್​​ ಪತ್ತೆಯಾಗಿದೆ ಇದರಲ್ಲಿ ಏಕೆ 47 ಬಂದೂಕುಗಳು ಪತ್ತೆಯಾಗಿವೆ.

ರಾಯಗಡದಲ್ಲಿ ಜಿಲ್ಲೆಯ ಶ್ರೀವರ್ಧನ ಹರಿಹರೇಶ್ವರ ತೀರದಲ್ಲಿ ಅಪರಿಚಿತ ಸ್ಪೀಡ್​ ಪತ್ತೆಯಾಗಿದ್ದು, ಈ​ ಬೋಟ್​ನಲ್ಲಿ 3 ಏಕೆ 47 ಗನ್​ಗಳು, ರೈಪಲ್ಸ್​, ಬುಲೆಟ್​ಗಳು ಪತ್ತೆಯಾಗಿವೆ.

ಈ ಎರಡೂ ದೋಣಿಗಳಲ್ಲಿ ಯಾವುದೇ ವ್ಯಕ್ತಿಗಳು ಪತ್ತೆಯಾಗಿಲ್ಲ. ಇದರಲ್ಲಿದ್ದ ಬಂದೂಕುಗಳನ್ನ ಹಾಗೂ ಸಾಮಗ್ರಿಗಳನ್ನು ಪರಿಶೀಲಿಸಲಾಗುತ್ತಿದೆ. ಬೋಟ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೂಡಲೇ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದ್ದು, ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲೆಯಲ್ಲಿ ಪೊಲೀಸರು ಜಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಆಗಮಿಸಿದೆ. ಸದ್ಯ ಸ್ಥಳೀಯರ ಸಹಾಯದಿಂದ ದೋಣಿಯನ್ನು ದಡಕ್ಕೆ ತರಲಾಗಿದೆ. ಈ ಮೂಲಕ ಏನಾದ್ರೂ ಭಯೋತ್ಪಾದಕರು ಮುಂಬೈ ಮಾದರಿಯಲ್ಲಿ ದಾಳಿ ರೀತಿಯಲ್ಲಿ ಸಂಚು ರೂಪಿಸಿದ್ರಾ ಎಂಬಂತೆ ಈ ಗನ್​ ಗಳು ಬಾಸವಾಗುತ್ತಿದೆ.

RELATED ARTICLES

Related Articles

TRENDING ARTICLES