Tuesday, April 8, 2025

ಸಲಗ ಸರ್​​​​​​ಪ್ರೈಸ್ ಗಿಫ್ಟ್.. ಮುದ್ದಿನ ಮಗಳು ಫುಲ್ ಖುಷ್

ಸ್ಯಾಂಡಲ್​ವುಡ್​ ಸಲಗ ದುನಿಯಾ ವಿಜಯ್​ ಜೀವನದಲ್ಲಿ ಅದೃಷ್ಠ ರೇಖೆ ತಿರುಗಿದೆ. ಸಲಗ ಸಿನಿಮಾ ನಂತ್ರ ಸಕ್ಸಸ್​​​ ಪೀಕ್​ನಲ್ಲಿರೋ ಬ್ಲಾಕ್​ ಕೋಬ್ರಾ, ನಟ ಹಾಗೂ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಸಖತ್​ ಬ್ಯುಸಿ ಇರೋ ದುನಿಯಾ ವಿಜಯ್​ ಮಗಳಿಗೆ ಪ್ರೀತಿಯ ಉಡುಗೊರೆ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

  • ಪುತ್ರಿ ಮೋನಿಕಾಗೆ ಬ್ಲಾಕ್​​ ಕೋಬ್ರಾ ದುಬಾರಿ ಕಾರ್​ ಗಿಫ್ಟ್​

ದುನಿಯಾ ಸಿನಿಮಾ ಮೂಲಕ ಕನ್ನಡ ಸಿನಿಲೋಕದಲ್ಲಿ ನೆಲೆ ಕಂಡ ಪ್ರತಿಭಾನ್ವಿತ ನಟ ದುನಿಯಾ ವಿಜಯ್​. ಕಲ್ಟ್​​ ಸಿನಿಮಾಗಳ ಮೂಲಕ ಮಾಸ್​ ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ಮಾಸ್​ ಹೀರೋ. ದುನಿಯಾ ವಿಜಯ್​​ಗೆ ಸಿನಿಮಾ ಹಾಗೂ ನಿಜಿಜೀವನ ಎರಡು ಕಲ್ಲು ಮುಳ್ಳಿನ ಹಾದಿಯಾಗಿತ್ತು. ಸೋಲು, ಗೆಲುವಿನ ಜತೆಗೆ ಸುಖ ದುಃಖಗಳನ್ನು ನುಂಗಿ ಫಿನಿಕ್ಸ್​​ ಹಕ್ಕಿಯಂತೆ ಎದ್ದು ಬಂದ ಗಟ್ಟಿ ಗಂಡೆದೆಯ ನಟ ವಿಜಯ್​​.

ಸಲಗ ಸಿನಿಮಾ ಮುನ್ನ ಜೇಬಲ್ಲಿ ಕೇವಲ 50 ರೂಪಾಯಿ ಇತ್ತು ಎಂದು ಅತ್ತಿದ್ದ ದುನಿಯಾ ವಿಜಯ್​​ ಜೀವನ ಈಗ ಬದಲಾಗಿದೆ. ಸಲಗ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಬ್ಲಾಕ್​ ಕೋಬ್ರಾ ಸಕ್ಸಸ್​ ಕಂಡಿದ್ದಾರೆ.  ಇದೀಗ ಭೀಮ ಸಿನಿಮಾ ಕೈಗೆತ್ತಿಕೊಂಡು ಸಖತ್​ ಬ್ಯುಸಿ ಆಗಿದ್ದಾರೆ.

ಸಾಂಸಾರಿಕ ಜೀವನದಲ್ಲೂ ಏರಿಳಿತ ಕಂಡಿರುವ ದುನಿಯಾ ವಿಜಯ್​ ಹಲವು ಬಾರಿ ಸುದ್ದಿಯಾಗಿದ್ದಾರೆ. ದುನಿಯಾ ವಿಜಯ್​ ಇಬ್ಬರು ಹೆಣ್ಣು ಮಕ್ಕಳು, ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದಾರೆ. ಮಕ್ಕಳಂದ್ರೆ ವಿಜಯ್​ಗೂ ಪಂಚಪ್ರಾಣ. ಇದೀ ಹಿರಿಯ ಮಗಳು ಮೋನಿಕಾಗೆ ದುಬಾರಿ ಕಾರ್​ ಗಿಫ್ಟ್​ ಕೊಡುವ ಮೂಲಕ ಅಚ್ಚು ಮೆಚ್ಚಿನ ತಂದೆಯಾಗಿದ್ದಾರೆ.

ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ ಮಕ್ಕಳ ಪಾಲಿಗೆ ದುನಿಯಾ ವಿಜಯ್ ಪ್ರೀತಿಯ ತಂದೆ. ಇದು ಮತ್ತೊಮ್ಮೆ ಸಾಭೀತಾಗಿದೆ. ಮಗಳ ಹುಟ್ಟುಹಬ್ಬಕ್ಕೆ ವಿಜಿ ದುಬಾರಿ ಬೆಲೆಯ ಕಾರು ಗಿಫ್ಟ್ ಮಾಡಿದ್ದಾರೆ. ಅಪ್ಪ ಮತ್ತು ಕಾರಿನ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು, ಲವ್ ಯು ಅಪ್ಪ ಎಂದು ಮೋನಿಕಾ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಬೀ ಪೋಸ್ಟ್​ ಸ್ಯಾಂಡಲ್​​ವುಡ್​​​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸೇಫ್​ ರೈಡ್​ ಮೋನಿಕಾ ಎಂದು ಹಲವರು ಕಮೆಂಟ್​ ಮಾಡ್ತಿದ್ದಾರೆ. ಇದ್ರ ಜತೆಗೆ ಅಪ್ಪ ಕೊಡಿಸಿದ ಕಾರನ್ನು ಡ್ರೈವ್​ ಮಾಡಿಕೊಂಡು ಹೋಗುವ ವೀಡಿಯೋ ಕೂಡ ಟ್ರೆಂಡಿಂಗ್​​ನಲ್ಲಿದೆ. ಅಂತೂ ಫ್ಯಾಮಿಲಿ ಕಲಹಗಳ ನಡುವೆ ಮಕ್ಕಳ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ದುನಿಯಾ ವಿಜಯ್​ ಮೆರೆದಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES