Sunday, December 22, 2024

ತವರೂರಿಗೆ 50 ಲಕ್ಷ ದೇಣಿಗೆ ನೀಡಿದ ಮಾನ್​ಸ್ಟರ್​​​​​​​​ ನೀಲ್..!

ಸಿನಿಮಾಂತ್ರಿಕ ಪ್ರಶಾಂತ್​ ನೀಲ್​ ಕೆಜಿಎಫ್​ ಸಿನಿಮಾ ನಂತ್ರ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ಹೋದಲ್ಲಿ ಬಂದಲ್ಲಿ ನೀಲ್​​​ಗೆ ಫ್ಯಾನ್ಸ್​​ ಮುತ್ತಿಕೊಳ್ತಾರೆ. ಕೆಜಿಎಫ್​​ ಸಿನಿಮಾ ಕೊಟ್ಟ ಯಶಸ್ಸು ಅವರನ್ನ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇದೀಗ ತಾವು ಹುಟ್ಟೂರಿಗೆ ತಮ್ಮ ಕೊಡುಗೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಯೆಸ್​​.. ನೀಲ್​ ಮಾಡಿದ ಆ ಪುಣ್ಯದ ಕೆಲಸ ಏನು ಗೊತ್ತಾ..? ಹಾಗಾದರೆ ಈ ಸ್ಟೋರಿ ಓದಿ.

ತಂದೆಯ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್​​ ಕೊಟ್ಟ ಪ್ರಶಾಂತ್​​​

ಪ್ರಶಾಂತ್​ ನೀಲ್​​​​, ಐದು ವರ್ಷಗಳ ಹಿಂದೆ ಈ ಹೆಸ್ರಿನ ಪರಿಚಯ ಯಾರಿಗೂ ತಿಳಿದಿರಲಿಲ್ಲ. ಆದ್ರೆ, ಈಗ ಪ್ರಶಾಂತ್​ ನೀಲ್​ ಬಗ್ಗೆ ಇಂಟ್ರಡಕ್ಷನ್​​ ಕೊಡಬೇಕಾಗಿಲ್ಲ. ದೇಶ ವಿದೇಶಗಳಲ್ಲೂ ನೀಲ್​​ ಡೈರೆಕ್ಷನ್​​ ಬಗ್ಗೆ ಚರ್ಚೆಗಳು ನಡೆಯುತ್ತವೆ. ನೀಲ್​ ನೆಕ್ಸ್ಟ್​​ ಸಿನಿಮಾ ಯಾವುದು ಅಂತಾ ಚಾತಕ ಪಕ್ಷಿಗಳಂತೆ ಅಭಿಮಾನಿಗಳು ಕಾಯ್ತಿರ್ತಾರೆ. ಯೆಸ್​​.. ನೀಲ್​ ಮೇಕಿಂಗ್​ ಸ್ಟೈಲ್​ ಮಾಡಿರೋ ಮ್ಯಾಜಿಕ್​ ತಾಕತ್ತು ಹಾಗಿದೆ. ಇದೀಗ ನೀಲ್​​ ಸಿನಿಮಾ ಹೊರತಾಗಿಯೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹುಟ್ಟೂರಿನ ಜನತೆ ನೀಲ್​ ಸೇವೆಯನ್ನು ಸ್ಮರಿಸುವಂತಾ ಕೆಲಸ ಮಾಡಿ ಸದ್ದು ಮಾಡ್ತಿದ್ದಾರೆ.

ಪ್ರಶಾಂತ್​ ನೀಲ್​​ ಬಂದ ನಂತ್ರ ಕನ್ನಡ ಚಿತ್ರರಂಗದ ಮಾರ್ಕೆಟ್​​​ ಚೇಂಜ್​​ ಆಗಿದೆ. ಬಾಯಿ ಬಿಟ್ಟರೆ ಸಾವಿರ ಕೋಟಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಅನ್ನುವಂತಾಗಿದೆ. ಇನ್ನೂ ಕೆಜಿಎಫ್​ ಸಿನಿಮಾದಿಂದ ನೀಲ್​​ ಬಾಚಿದ್ದು ಬರೋಬ್ಬರಿ 1500 ಕೋಟಿ. ಭಾರತದಲ್ಲಿ ನೀಲ್​​ ಡೈರೆಕ್ಷನ್​​ಗೆ ಸಿಕ್ಕಾಪಟ್ಟೆ ಬೇಡಿಕೆ ಕೂಡ ಶುರುವಾಗಿದೆ. ಈ ನಡುವೆ ತಮ್ಮ ತಂದೆಯ ಬರ್ತ್​​ಡೇಗೆ ಹುಟ್ಟೂರಿಗೆ ಭೇಟಿ ಕೊಟ್ಟಿದ್ದ ನೀಲ್​ ಆಸ್ಪತ್ರೆಗೆ 50ಲಕ್ಷ ದೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಭಾರತೀಯರ ಪಾಲಿಗೆ ಸ್ಮರಣೀಯ ದಿನ. ಸೆಲೆಬ್ರಿಟಿಗಳು ಸೇರಿದಂತೆ, ಸಾಮಾನ್ಯ ಜನತೆ ಕೂಡ ಅಮೃತ ದಿನತ್ಸೋವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದೆ. ಇನ್ನೂ ಪ್ರಶಾಂತ್​ ನೀಲ್​ಗೂ ಈ ಬಾರಿಗೆ ಸ್ವಾತಂತ್ರ್ಯ ದಿನಾಚರಣೆ ಸ್ಪೆಷಲ್​ ಆಗಿತ್ತು. ಹುಟ್ಟೂರಿಗೆ ಭೇಟಿ ಕೊಟ್ಟಿದ್ದ ಪ್ರಶಾಂತ್​ ನೀಲ್​, ಆಂಧ್ರಪ್ರದೇಶದ ನೀಲಕಂಠಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು. ಜತೆಗೆ ನೀಲ್​ ತಂದೆ ಶುಭಾಷ್ ಸ್ವಾತಂತ್ರ್ಯದ ದಿನವೇ ಜನಿಸಿದ್ದರು. ಈ ಬರ್ತ್​ ಡೇ ಸವಿನೆನಪಿಗಾಗಿ ನೀಲ್​ ಹಳ್ಳಿಯಲ್ಲಿ ನಿರ್ಮಾಣವಾಗ್ತಿರೋ ಎಲ್​​ವಿ ಪ್ರಸಾದ್​ ಕಣ್ಣಿನ ಆಸ್ಪತ್ರೆಗೆ 50 ಲಕ್ಷ ದೇಣಿಗೆ ನೀಡುವ ಮೂಲಕ ಕಿರುಕಾಣಿಕೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರಶಾಂತ್​ ನೀಲ್​ ಸಂಬಂಧಿ ರಘುವೀರ್​ ರೆಡ್ಡಿ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಹೆಮ್ಮೆಯ ಕ್ಷಣ. ನನ್ನ ಸಹೋದರನ ಪುತ್ರ ಪ್ರಶಾಂತ್​ ನೀಲ್​ 50 ಲಕ್ಷ ದೇಣಿಗೆ ನೀಡಿದ್ದಾರೆ. ನೀಲ್​ ತಂದೆ ಸುಭಾಷ್​ ರೆಡ್ಡಿ ಕೂಡ 1947 ಆಗಸ್ಟ್​ 15 ರಂದೇ ಜನಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಅಂತೂ ಹುಟ್ಟಿದ ಊರಿಗೆ ಈ ರೀತಿ ಸೇವೆ ಸಲ್ಲಿಸುವ ಮೂಲಕ ಕೃತಜ್ಞತೆ ಮೆರೆದಿದ್ದಾರೆ ನೀಲ್​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES