Wednesday, January 22, 2025

ಡಿಕೆಶಿ-ಹೆಚ್​ಡಿಕೆ ಅಭಿಮಾನಿಗಳ ಜೈಕಾರದ ವಾರ್​.!

ಚಿತ್ರದುರ್ಗ: ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ಅಧಕ್ಷ ಡಿ.ಕೆ ಶಿವಕುಮಾರ್ ಅಭಿಮಾನಿಗಳ ನಡುವೆ ವೇದಿಕೆಯಲ್ಲಿ ಜೈಕಾರದ ಗಲಾಟೆ ನಡೆದಿದೆ.

ಹಿರಿಯೂರು ತಾಲ್ಲೂಕು ಒಕ್ಕಲಿಗರ ಸಂಘದಿಂದ ಇಂದು ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿ ಮೈಕ್ ಕಿತ್ತುಕೊಂಡು ಡಿ.ಕೆ ಶಿವಕುಮಾರ್ ಅಭಿಮಾನಿಗಳು ಡಿಕೆಶಿ ಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಇಬ್ಬರು ಕಾರ್ಯಕರ್ತರ ನಡುವೆ ವಾಗ್ದಾದ ಉಂಟಾಯಿತು.

ವೇದಿಕೆಯ ಮೇಲೆ ಎರಡು ಬದಿಯಲ್ಲಿ ಇಬ್ಬರೂ ಅಭಿಮಾನಿಗಳಿಂದ ಜೈಘೋಷದ ಪೈಟ್ ನ ಗೊಂದಲದ ನಡುವೆ ನಂಜಾವಧೂತ ಶ್ರೀಗಳು ಹಾಗೂ ನಿರ್ಮಲಾನಂದ ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

RELATED ARTICLES

Related Articles

TRENDING ARTICLES