Wednesday, January 22, 2025

ಉತ್ತರ ಕರ್ನಾಟಕದಲ್ಲಿ ದೊಡ್ಮನೆ ಧೀರೇನ್​ಗೆ ಅಪ್ಪು ಗೌರವ

ರಾಜ ವಂಶ. ಮತ್ತಿನಂಶ. ಕನ್ನಡದ ದೊಡ್ಮನೆಯ ಕುಡಿ ಧೀರೆನ್​​ ಶಿವನ ಉಗ್ರವತಾರ ತಾಳಿ ತೆರೆಗೆ ಬರೋ ತವಕದಲ್ಲಿದ್ದಾರೆ. ಈ ನಡುವೆ ಸಿನಿಮಾ ಪ್ರೊಮೋಷನ್ಸ್​​ಗೆ ಕರುನಾಡಿನಾದ್ಯಂತ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ನಟ ಧೀರೆನ್​​​​. ಉತ್ತರ ಕರ್ನಾಟಕದ ಪ್ರವಾಸದಲ್ಲಿರೋ ಧೀರೆನ್​ ರಾಮ್​​ಕುಮಾರ್​ಗೆ​​ ಭವ್ಯ ಸ್ವಾಗತ ಸಿಕ್ಕಿದ್ದು ಹೂವಿನ ಸುರಿಮಳೆಯಾಗಿದೆ. ಹಾಗಾದರೆ ಈ ಸ್ಟೋರಿ ಓದಿ.

ಅಪ್ಪು ಭಾವಚಿತ್ರವಿರುವ ಟೀಶರ್ಟ್​​ನಲ್ಲಿ ಧೀರೇನ್​​​ ಮಿಂಚು

ನಟ ರಾಮ್​​ಕುಮಾರ್​ ಅವ್ರ ಪುತ್ರ ಹಾಗೂ ಡಾ.ರಾಜ್​​​ಕುಮಾರ್​ ಮೊಮ್ಮಗ ಧೀರೆನ್ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಸಿನಿಮಾ ಶಿವ 143. ಆಗಸ್ಟ್​ 26ಕ್ಕೆ ಸಿಲ್ವರ್​ ಸ್ಕ್ರೀನ್​ ಮೇಲೆ ಶಿವನ ಅಬ್ಬರ ಜೋರಾಗಿರಲಿದೆ. ರಿಲೀಸ್​ಗೂ ಮುನ್ನವೇ ಸಖತ್​ ಹೈಪ್​ ಕ್ರಿಯೇಟ್​ ಮಾಡಿರೋ ಶಿವ 143 ಸಿನಿಮಾ ಪ್ರೋಮೋಷನ್​​ನಲ್ಲಿ ಬ್ಯುಸಿಯಾಗಿದೆ. ಆರಂಭದಲ್ಲಿ ಚಿತ್ರತಂಡ ಕಲಬುರ್ಗಿ ವಿಸಿಟ್​ ಮಾಡಿದ್ದು ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​​​ಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡ್ತಿರೋ ದೊಡ್ಮನೆಯ ಕುಡಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅಪ್ಪು ಫೋಟೋ ಇರೋ ಟೀಶರ್ಟ್​ನಲ್ಲಿ ಮಿಂಚ್ತಿದ್ದ ಧೀರೇನ್​ ಕಂಡು ಕಲಬುರ್ಗಿ ಜನತೆ ಪುಳಕಿತರಾಗಿದ್ದಾರೆ. ಬೆಳ್ಳಿ ರಥವೇರಿ ಬರ್ತಿದ್ದ ಶಿವನನ್ನು ಕಂಡು ಉತ್ತರ ಕರ್ನಾಟಕದ ಮಂದಿ ಹೂವಿನ ಮಳೆ ಸುರಿಸಿದ್ದಾರೆ. ಕಿಕ್ಕಿರಿದು ಸೇರಿದ್ದ ಜನರನ್ನು ಕಂಡು ಚಿತ್ರತಂಡ ಕೂಡ ಥ್ರಿಲ್​ ಆಗಿದೆ.

ಶಿವ 143 ಚಿತ್ರ ಆರ್​​ಎಕ್ಸ್​​ 100 ರೀಮೇಕ್​ ಆದ್ರೂ ಕೂಡ ಸಾಕಷ್ಟು ಬದಲಾವಣೆಗಳೊಂದಿಗೆ ತೆರೆಗೆ ಬರೋಕೆ ತಯಾರಾಗಿದೆ. ಈಗಾಗ್ಲೇ ಫಸ್ಟ್​​ ಲುಕ್​​​​ ಹಾಗೂ ಕ್ಯಾರೆಕ್ಟರ್​​ ಟೀಸರ್​​​​ನಲ್ಲಿ ಮಾಸ್​ ಅವತಾರದಲ್ಲಿ ಮಿಂಚಿದ ಧೀರೆನ್​​ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದಾರೆ. ಸೆಂಚುರಿ ಸ್ಟಾರ್​ ಶಿವಣ್ಣ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕೂಡ ಧೀರೆನ್​ ಆ್ಯಕ್ಟಿಂಗ್​ಗೆ ಫಿದಾ ಆಗಿದ್ದಾರೆ. ಇದ್ರ ನಡುವೆ ಕಲಬುರ್ಗಿಯಲ್ಲಿ ಸಿಕ್ಕ ವೆಲ್ಕಮ್​​ ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ.

ಇನ್ನು ಮುಂದೆ ಚಿತ್ರತಂಡ ಹೊಸಪೇಟೆ, ಗಂಗಾವತಿ, ಹುಬ್ಬಳ್ಳಿಯಲ್ಲೂ ಭರ್ಜರಿ ಪ್ರಚಾರದ ಕಹಳೆ ಊದಲಿದೆ. ಜಯಣ್ಣ, ಭೋಗೇಂದ್ರ, ಡಾ.ಸೂರಿ ಸಾರಥ್ಯದಲ್ಲಿ ನಿರ್ಮಾಣವಾಗ್ತಿರೋ ಶಿವ 143 ಚಿತ್ರಕ್ಕೆ ಅನಿಲ್​​ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ ಚಿತ್ರಕ್ಕೆ ಪ್ಲಸ್​ ಆಗಲಿದೆ. ಚಿತ್ರದಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ಚರಣ್​ ರಾಜ್​ ಸೇರಿದಂತೆ ಕಲಾವಿದರ ದಂಡೇ ಇದೆ. ದೊಡ್ಮನೆ ಬಳಗದಿಂದ ನಾಯಕನಾಗಿ ಮಿಂಚಲಿರುವ ಧೀರೇನ್​ ​​ ಅಬ್ಬರಕ್ಕೆ ಪ್ರೇಕ್ಷಕ ಏನಂತಾನೆ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES