ಮಹಾರಾಷ್ಟ್ರ: ಮಹಾರಾಷ್ಟ್ರದ ರಾಯಗಡ ಕಡಲ ತೀರದಲ್ಲಿ ಅನುಮಾನಸ್ಫದ ಬೋಟ್ ಪತ್ತೆ ಹಿನ್ನಲೆ ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಧಾನಸಭೆಯ ಸದನದಲ್ಲಿ ಮಾತನಾಡಿದ್ದಾರೆ.
ರಾಯಗಡದಲ್ಲಿ ಜಿಲ್ಲೆಯ ಶ್ರೀವರ್ಧನ ಹರಿಹರೇಶ್ವರ ತೀರದಲ್ಲಿ ಅಪರಿಚಿತ ಸ್ಪೀಡ್ ಪತ್ತೆಯಾಗಿದ್ದು, ಈ ಬೋಟ್ನಲ್ಲಿ 3 ಎಕೆ 47 ಗನ್ಗಳು, ರೈಪಲ್ಸ್, ಬುಲೆಟ್ಗಳು ಪತ್ತೆಯಾಗಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿದ ಫಡ್ನವಿಸ್, ದೋಣಿಯಲ್ಲಿ ಮೂರು ಎಕೆ 47 ರೈಫಲ್‌ಗಳು ಪತ್ತೆಯಾಗಿವೆ. ಪತ್ತೆಯಾದ ಬೋಟ್ ಆಸ್ಟ್ರೇಲಿಯಾದ ಪ್ರಜೆಗೆ ಸೇರಿದೆ. ಸಮುದ್ರದಲ್ಲಿ ಬೋಟ್‌ನ ಇಂಜಿನ್ ಕೆಟ್ಟು ಹೋಗಿದೆ. ಸದ್ಯ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದರು.
ಅಗತ್ಯ ಬಿದ್ದರೆ ಜಿಲ್ಲೆಯಲ್ಲಿ ಹಾಗೂ ಕಡಲು ತೀರದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗುವುದು. ಕೇಂದ್ರೀಯ ಸಂಸ್ಥೆಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ನಾವು ಏನನ್ನೂ ತಳ್ಳಿಹಾಕುವಂತಿಲ್ಲ ಪೊಲೀಸ್ ತನಿಖೆ ನಂತರ ಘಟನೆ ಅಂಶಗಳ ಬಗ್ಗೆ ತಿಳಿಯಲಿದೆ ಎಂದರು.