Monday, December 23, 2024

ಏಷ್ಯಾ ಕಪ್ ಟೂರ್ನಿಗೆ ದಿನಗಣನೆ ಶುರು: ಅಭ್ಯಾಸಕ್ಕಿಳಿದ ವಿರಾಟ್​ ಕೊಹ್ಲಿ

ನವದೆಹಲಿ: ಬರುವ ಆಗಸ್ಟ್ 28 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು ಮಾಜಿ ಕ್ಯಾಪ್ಟನ್​, ಭಾರತ ಆಟಗಾರ ವಿರಾಟ್​ ಕೊಹ್ಲಿ ಇನ್ನು ಎರಡು ವಾರ ಮುಂಚಿತವಾಗೇ ಸಮರಾಭ್ಯಾಸ ಆರಂಭಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ವಿರಾಟ್​ ಕೊಹ್ಲಿ, ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನ ಭಾರತ ಎದುರಿಸಲಿದೆ. ಈ ಪಂದ್ಯಕ್ಕೆ ಈಗಿನಿಂದಲೇ ವಿರಾಟ್ ತಮ್ಮ ದೇಹವನ್ನ ದಂಡಿಸುತ್ತಿದ್ದಾರೆ.

2019 ರಿಂದ ಮೂರು ಮಾದರಿಯ ಪಂದ್ಯಗಳಲ್ಲಿ ಕೊಹ್ಲಿ ಶತಕ ಗಳಿಸಿಲ್ಲ. ಹೀಗಾಗಿ ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಭರವಸೆ ಇಡಲಾಗಿದೆ. ಇದಕ್ಕಾಗಿ ಕೊಹ್ಲಿ ಕೂಡ ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿರಾಟ್ ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ. ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿ ಇನ್ನಷ್ಟು ಫಿಟ್ ಆಗುತ್ತಿದ್ದಾರೆ. ವೇಟ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES