ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡಿದ್ದ ಬಾಲಿವುಡ್ನ ದೊಡ್ಡ ದೊಡ್ಡ ಸಿನಿಮಾಗಳಿಗೆ ಬಾಯ್ಕಾಟ್ ಸಂಕಷ್ಟ ಎದುರಾಗಿದೆ. ಬಾಲಿವುಡ್ನ ಬಿಗ್ ಸ್ಟಾರ್ ಸಿನಿಮಾಗಳು ನೆಗಟಿವ್ ಪ್ರಚಾರದಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ನೆಲಕ್ಕಪ್ಪಳಿಸುತ್ತಿವೆ. ಬಾಯ್ಕಾಟ್ ಭೂತ ಬಾಲಿವುಡ್ ತಾರೆಯರನ್ನು ಬೆನ್ನು ಹತ್ತಿ ಕಾಡ್ತಿದೆ. ಇನ್ನೂ ಯಾವ ಯಾವ ಸಿನಿಮಾಗಳು ಈ ಭಯದಲ್ಲಿ ಬದುಕ್ತಾ ಇವೆ ಗೊತ್ತಾ..? ಈ ಸ್ಟೋರಿ ಓದಿ.
ಶಾರೂಖ್, ಹೃತಿಕ್ಗೂ ಬೆನ್ನು ಹತ್ತಿದ ಬೇತಾಳ ಬಾಯ್ಕಾಟ್
ಭಾರತದ ಸಾರ್ವಭೌಮತೆಯನ್ನು ಪ್ರಶ್ನೆ ಮಾಡಿದ್ರೆ ಏನೆಲ್ಲಾ ಸಂಕಷ್ಟ ಎದುರಿಸಬೇಕಾಗುತ್ತೆ ಅನ್ನೋ ಪಾಠವನ್ನು ಜನರು ಸ್ಟಾರ್ ನಟರಿಗೆ ಕಲಿಸಿದ್ದಾರೆ. ಬಾಲಿವುಡ್ನ ದೊಡ್ಡ ದೊಡ್ಡ ಸಿನಿಮಾಗಳೇ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಮಖಾಡೆ ಮಲಗಿವೆ. ಹೇಳ ಹೆಸರಿಲ್ಲದಂತೆ ಥಿಯೇಟರ್ ಬಿಟ್ಟು ಓಡಿ ಹೋಗಿವೆ. ಈ ಸಾಲಿನಲ್ಲಿ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ಕುಮಾರ್ ನಟನೆಯ ರಕ್ಷಾ ಬಂಧನ್ ಹಿಟ್ ಲಿಸ್ಟ್ನಲ್ಲಿವೆ.
ಬಾಯ್ಕಾಟ್ ಭೂತ ಬೇರೆ ಸಿನಿಮಾಗಳಿಗೂ ದೊಡ್ಡ ತಲೆ ನೋವಾಗಿಬಿಟ್ಟಿದೆ.ಅಸಹಿಷ್ಣುತೆ ಬಗ್ಗೆ ದನಿ ಎತ್ತಿದ್ದ ಆಮೀರ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಹ್ಯಾಷ್ಟ್ಯಾಗ್ ಮೂಲಕ ಬಿಸಿ ಮುಟ್ಟಿಸಿದ್ದರು. ಸಿನಿಮಾ ಮೇಕಿಂಗ್ ಬಗ್ಗೆ ಮೆಚ್ಚಗೆಯ ಮಾತುಗಳು ಕೇಳಿ ಬಂದ್ರೂ ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಸೋತು ಸುಣ್ಣವಾಯಿತು. ಚಡ್ಡಾ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದ ಅಕ್ಷಯ್, ಹೃತಿಕ್ ರೋಷನ್ ಸಿನಿಮಾಗಳಿಗೂ ಈ ಬಿಸಿ ತಟ್ಟಿದೆ. ಬಾಯ್ಕಾಟ್ ರಕ್ಷಾ ಬಂಧನ್ಅಭಿಯಾನ ಕೂಡ ಜೋರಾಗಿದೆ.
ಭಾರತದ ಅಖಂಡತೆಯಯನ್ನು ಪ್ರಶ್ನೆ ಮಾಡಿದ್ರೆ, ಭಾರತದ ಸಂಸ್ಕೃತಿಯನ್ನು ಅವಹೇಳನ ಮಾಡಿದ್ರೆ, ಪರಿಣಾಮ ಯಾವ ಲೆವೆಲ್ಗೆ ಇರುತ್ತೆ ಅನ್ನೋದು ಬಿಟೌನ್ ಮಂದಿಗೆ ಗೊತ್ತಾಗಿದೆ. ಈ ಕಂಟಕದ ಸುಳಿಯಲ್ಲಿ ಶಾರುಖ್ ಖಾನ್ ಅಭಿನಯದ ಜವಾನ್, ಹೃತಿಕ್ ನಟನೆಯ ವಿಕ್ರಂ ವೇದ, ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಕೂಡ ಸಿಲುಕಲಿವೆ.
ಬಾಯ್ಕಾಟ್ ಟ್ರೆಂಡ್ ಒಳ್ಳೆ ಸಿನಿಮಾಗಳನ್ನು ನುಂಗಿ ಹಾಕುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಈಗಲೇ ಚಿವುಟಿ ಹಾಕಬೇಕು. ಬಾಲಿವುಡ್ನಲ್ಲಿ ಧಾರ್ಮಿಕತೆಯ ಆಧಾರದ ಮೇಲೆ ಸಿನಿಮಾಗಳ ಮಾರುಕಟ್ಟೆಯನ್ನು ನಾಶ ಮಾಡಲಾಗ್ತಿದೆ ಎಂಬ ಅಭಿಪ್ರಾಯ ಕೂಡ ಕೇಳಿ ಬರ್ತಿದೆ. ಇದ್ರ ಬೆನ್ನಲ್ಲೇ, ಅರ್ಜುನ್ ಕಪೂರ್ ಕೂಡ ಕರೀನಾ ಕಪೂರ್ಗೆ ಬೆಂಬಲ ಸೂಚಿಸಿದ್ದು, ಕೆಲವರನ್ನು ಮಾತ್ರ ಟಾರ್ಗೆಟ್ ಮಾಡಲಾಗ್ತಿದೆ. ಇದು ಒಳ್ಳೆಯದಲ್ಲ ಎಂದಿದ್ದಾರೆ.
ಎನಿವೇ, ಸಾಮಾಜಿಕ ಬದ್ಧತೆ ಮೆರೆಯಬೇಕಾದ ನಟರು ಕ್ಷುಲ್ಲಕ ಮಾತುಗಳ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಇನ್ನಾದರು ತಿದ್ದಿಕೊಂಡರೆ ಅವರಿಗೆ ಒಳ್ಳೆಯದು.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ