Wednesday, January 22, 2025

ಬರ್ತ್ ಡೇ ಸಂಭ್ರಮದಲ್ಲಿ ಜೂನಿಯರ್ ಕ್ರೇಜಿಸ್ಟಾರ್ ವಿಕ್ಕಿ..!

ತ್ರಿವಿಕ್ರಮ ಚಿತ್ರದಿಂದ ನಾಯಕನಟನಾಗಿ ಸ್ಯಾಂಡಲ್​ವುಡ್ ಅಖಾಡಕ್ಕೆ ಇಳಿದು, ಚೊಚ್ಚಲ ಚಿತ್ರದಲ್ಲೇ ಪರಾಕ್ರಮ ತೋರಿದ ವಿಕ್ರಮ್​ಗೆ ಇಂದು ಬರ್ತ್ ಡೇ ಸಂಭ್ರಮ. ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಕೇಕ್ ಕತ್ತರಿಸಿ, ಜಾಲಿ ಮೂಡ್​​ನಲ್ಲಿರೋ ವಿಕ್ಕಿ ನೆಕ್ಸ್ಟ್ ಪ್ಲಾನ್ಸ್ ಏನು ಅಂತೀರಾ..? ಈ ಸ್ಟೋರಿ ಓದಿ.

  • ಫ್ಯಾನ್ಸ್ ಮತ್ತು ಕುಟುಂಬಸ್ಥರ ಜೊತೆ ಕೇಕ್ ಕತ್ತರಿಸಿ ಸಂಭ್ರಮ

ಯೆಸ್.. ಸ್ಯಾಂಡಲ್​ವುಡ್​ನ ಕನಸುಗಾರ, ಟ್ರೆಂಡ್ ಸೆಟ್ಟರ್ ಡಾ. ವಿ ರವಿಚಂದ್ರನ್​ರ ಕಿರಿಯ ಮಗ ವಿಕ್ರಮ್ ರವಿಚಂದ್ರನ್​ಗೆ ಜನುಮ ದಿನದ ಸಂಭ್ರಮ. 27 ವಸಂತಗಳನ್ನು ಪೂರೈಸಿ, 28ನೇ ವರುಷಕ್ಕೆ ಕಾಲಿಟ್ಟಿರೋ ಹರುಷದಲ್ಲಿದ್ದಾರೆ ಜೂನಿಯರ್ ಕ್ರೇಜಿಸ್ಟಾರ್.

ತಂದೆಯಂತೆ ಸಿನಿಮಾ ಮೇಲೆ ಅತಿಯಾದ ವ್ಯಾಮೋಹವಿರೋ ವಿಕ್ಕಿ, ಹಗಲಿರುಳು ಅದರದ್ದೇ ಧ್ಯಾನದಲ್ಲಿರ್ತಾರಂತೆ. ಒಂದ್ಕಡೆ ಅಣ್ಣ ಮನೋರಂಜನ್ ಹಾಗೂ ತಂದೆ ರವಿಚಂದ್ರನ್​ರ ಸಿನಿಮಾಗಳ ಪ್ರೊಮೋಷನಲ್ ಆ್ಯಕ್ಟಿವಿಟೀಸ್​ನ ಹ್ಯಾಂಡಲ್ ಮಾಡ್ತಾ, ಮತ್ತೊಂದ್ಕಡೆ ತನ್ನ ಕರಿಯರ್​ನ ರೂಪಿಸಿಕೊಳ್ತಿದ್ದಾರೆ ವಿಕ್ರಮ್.

ಇತ್ತೀಚೆಗೆ ನಿರ್ದೇಶಕ ಸಹನಾ ಮೂರ್ತಿ ಸಾರಥ್ಯದ ತ್ರಿವಿಕ್ರಮ ಚಿತ್ರದಿಂದ ನಾಯಕನಟನಾಗಿ  ಲಾಂಚ್ ಆದ ವಿಕ್ಕಿಗೆ ಥಿಯೇಟರ್ ಮುಂದೆ ಕಟೌಟ್ ಬಿದ್ದಿದೆ. ಚೊಚ್ಚಲ ಚಿತ್ರದಲ್ಲೇ ಮನೋಜ್ಞ ಅಭಿನಯ ನೀಡಿದ ವಿಕ್ಕಿ, ಕನ್ನಡ ಕಲಾಭಿಮಾನಿಗಳ ದಿಲ್ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಅಂದ್ರಿಂದ ಒಂದಷ್ಟು ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿದ್ದಾರೆ.

ಇಂದು ರಾಜ್​ಕುಮಾರ್ ರಸ್ತೆಯಲ್ಲಿರೋ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ವಿಕ್ರಮ್. ಇದೇ ಸಂದರ್ಭದಲ್ಲಿ ಮಾತನಾಡಿರೋ ಅವ್ರು, ಸದ್ಯದಲ್ಲೇ ಹೊಚ್ಚ ಹೊಸ ಸಿನಿಮಾದ ಬಗ್ಗೆ ಸದ್ಯದಲ್ಲೇ ಮಾಹಿತಿ ರಿವೀಲ್ ಮಾಡೋದಾಗಿ ಹೇಳಿಕೊಂಡಿದ್ದಾರೆ.

ಹೈಟು ವೆಯ್ಟ್ ಜೊತೆ ಏನನ್ನಾದರೂ ಸಾಧಿಸಬೇಕು ಅನ್ನೋ ಹಂಬಲವಿರೋ ವಿಕ್ಕಿ, ತಾತ ವೀರಾಸ್ವಾಮಿ ಹಾಗೂ ತಂದೆ ರವಿಮಾಮನ ಹೆಸ್ರನ್ನ ಉಳಿಸೋ ಲಕ್ಷಣ ತೋರಿದ್ದಾರೆ. ಕ್ರೇಜಿ ಕುಟುಂಬದಿಂದ ಈ ಜನರೇಷನ್​ಗೆ ಮತ್ತೊಬ್ಬ ಭರವಸೆಯ ನಾಯಕನಟ ಹುಟ್ಟುಕೊಂಡಿರೋದು ಸುಳ್ಳಲ್ಲ. ಹ್ಯಾಪಿ ಬರ್ತ್ ಡೇ ವಿಕ್ಕಿ, ನಿಮ್ಮ ಬತ್ತಳಿಕೆಯಿಂದ ಸದಭಿರುಚಿಯ ಸಿನಿಮಾಗಳು ಬೆಳ್ಳಿತೆರೆ ಬೆಳಗುವಂತಾಗಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES