Wednesday, January 22, 2025

ಆಸ್ಕರ್ ರೇಸ್​ನಲ್ಲಿ ಮೌಳಿ RRR.. ಇದು ಭಾರತದ ಹೆಮ್ಮೆ

ರಾಜಮೌಳಿಯ ಒಂದೊಂದು ಸಿನಿಮಾ ಕೂಡ ಒಂದೊಂದು ಪರ್ವತ ಶ್ರೇಣಿ ಇದ್ದಂತೆ. ಅವ್ರು ಸಿನಿಮಾನ ಕಟ್ಟಿಕೊಡೋ ಪರಿಗೆ ಹಾಲಿವುಡ್ ಮಂದಿ ಕೂಡ ಕ್ಲೀನ್ ಬೋಲ್ಡ್ ಆಗ್ತಾರೆ. ಸದ್ಯ ಅವ್ರ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ತ್ರಿಬಲ್ ಆರ್, ಆಸ್ಕರ್ ರೇಸ್​ನಲ್ಲಿ ಸಂಚಲನ ಮೂಡಿಸ್ತಿದೆ. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡೋ ಅಂತಹ ಕಲರ್​ಫುಲ್ ಸ್ಟೋರಿ ಇಲ್ಲಿದೆ.

  • ಬೆಸ್ಟ್ ಆ್ಯಕ್ಟರ್ ರೇಸ್​​ನಲ್ಲಿ ಯಂಗ್ ಟೈಗರ್ Jr. NTR ಮಿಂಚು
  • ಹಾಲಿವುಡ್ ಮ್ಯಾಗಜಿನ್​ನ ಸಂಭಾವ್ಯ ಪಟ್ಟಿಯಲ್ಲಿ ಕಮಾಲ್
  • ಟಾಮ್ ಹಾಂಕ್ಸ್, ಕೇಜ್, ಇವಾನ್ಸ್, ಆ್ಯಡಂ​ಗೆ ಟಫ್ ಫೈಟ್

ನಿನ್ನೆಯಷ್ಟೇ ಸ್ವತಂತ್ರ ದಿನದ ಅಮೃತ ಮಹೋತ್ಸವವನ್ನ ಭಾರತೀಯರಾದ ನಾವೆಲ್ಲಾ ಬಹಳ ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದೀವಿ. ಕಾಮನ್ ವೆಲ್ತ್ ಗೇಮ್ಸ್​ನಲ್ಲಿ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಪೈಪೋಟಿ ನೀಡಿ, ನೂರಾರು ಮೆಡಲ್​ಗಳನ್ನ ಗಳಿಸಿದೆ. ಇಂತಹ ಖುಷಿಯ ಸಂದರ್ಭದಲ್ಲಿ ಇಡೀ ಇಂಡಿಯಾ ಹೆಮ್ಮೆ  ಪಡೋ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದಾಗ್ತಿದೆ.

ಯೆಸ್.. ನಮ್ಮ ಸೌತ್​ನ ಡೈರೆಕ್ಟರ್ ಆದ ಎಸ್​ಎಸ್ ರಾಜಮೌಳಿ ಅವ್ರ ತ್ರಿಬಲ್ ಆರ್ ಸಿನಿಮಾ ಆಸ್ಕರ್​​ಗೆ ನಾಮಾಂಕಿತವಾಗಿದೆ. ಆ ನಿರ್ದೇಶಕ ನಮ್ಮ ಕರ್ನಾಟಕದ ರಾಯಚೂರು ಮೂಲದವರು ಅನ್ನೋದು ಮತ್ತೊಂದು ಖುಷಿ. ಇದು ನಿಜಕ್ಕೂ ಒಬ್ಬ ನಿರ್ದೇಶಕನ ಚಾಕಚಕ್ಯತೆಗೆ ಸಲ್ಲುತ್ತಿರೋ ಗೌರವ ಅನ್ನೋದ್ರ ಜೊತೆ ಪ್ರತಿಭೆಗೆ ತಕ್ಕ ಪುರಸ್ಕಾರ ಅಂದ್ರೂ ತಪ್ಪಾಗಲ್ಲ.

ಹಾಲಿವುಡ್​ನ ಪ್ರತಿಷ್ಠಿತ ಮ್ಯಾಗಜಿನ್​ ಪ್ರಕಟಿಸಿರೋ ಬೆಸ್ಟ್ ಆ್ಯಕ್ಟರ್ ಸಂಭಾವ್ಯರ ಪಟ್ಟಿಯಲ್ಲಿ ತ್ರಿಬಲ್ ಆರ್ ಸಿನಿಮಾದ ನಾಯಕನಟ ಜೂನಿಯರ್ ಹೆಸ್ರು ಕೇಳಿಬರ್ತಿದೆ. ಇದು ನಿಜಕ್ಕೂ ಕನ್ನಡಿಗರಾದ ನಾವು ಮತ್ತಷ್ಟು ಸಂಭ್ರಮಿಸೋ ಕ್ಷಣ. ಕಾರಣ ಜೂನಿಯರ್ ಎನ್​ಟಿಆರ್ ಅವ್ರ ತಾಯಿ ನಮ್ಮ ಕುಂದಾಪುರದ ಮೂಲದವ್ರು. ಅಲ್ಲಿಗೆ ಕನ್ನಡದ ಹೆಣ್ಣು ಮಗಳ ಕಂದ ಈ ಯಂಗ್ ಟೈಗರ್. ಹಾಗಾಗಿ ಪ್ರತಿಯೊಬ್ಬರಿಗೂ ಇದು ಅವಿಸ್ಮರಣೀಯ ಗಳಿಗೆ.

ಹಾಲಿವುಡ್​ನ ಟಾಪ್ ಌಕ್ಟರ್​ಗಳಾಗಿ ಮಿಂಚ್ತಿರೋ ಟಾಮ್ ಹಾಂಕ್ಸ್, ನಿಕೋಲಸ್ ಕೇಜ್, ಕ್ರಿಸ್ ಇವಾನ್ಸ್, ಌಡಂ ಸ್ಯಾಂಡ್ಲರ್, ಕ್ಯಾಸಿ ಅಫ್ಲೆಕ್ ರಂತಹ ಘಟಾನುಘಟಿ ಸೂಪರ್ ಸ್ಟಾರ್​ಗಳ ಮಧ್ಯೆ ಕೊಮರಂ ಭೀಮುಡು ಪಾತ್ರದಾರಿಯ ಹೆಸ್ರು ಕೇಳಿಬಂದಿರೋದು ವೆರಿ ಇಂಪ್ರೆಸ್ಸೀವ್. ಇಲ್ಲಿಯವರೆಗೂ ಇಂಡಿಯಾಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್​ ಲಭಿಸಿಲ್ಲ. ಅದು ಜೂನಿಯರ್ ಎನ್​ಟಿಆರ್ ಮುಖೇನ ಆದ್ರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ.

ಈ ಸುದ್ದಿ ಕೇಳ್ತಿದ್ದಂತೆ ಜೂನಿಯರ್ ಎನ್​ಟಿಆರ್ ಡೈ ಹಾರ್ಡ್​ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಬಾಲಿವುಡ್ ಅಂಗಳದಲ್ಲಿ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಸೇರಿದಂತೆ ಸಾಕಷ್ಟು ಮಂದಿ ಯಂಗ್ ಟೈಗರ್​ ಆಸ್ಕರ್ ಪ್ರಶಸ್ತಿ ಪಡೆಯಲಿ ಅಂತ ಶುಭ ಹಾರೈಸಿದ್ದಾರೆ. ಅಂದಹಾಗೆ ತ್ರಿಬಲ್ ಆರ್ ಸಿನಿಮಾ ಸ್ವತಂತ್ರಪೂರ್ವ ಭಾರತವನ್ನು ನೆನಪಿಸೋ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಕುರಿತ ಸಿನಿಮಾ.

ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಇಬ್ಬರು ಅಪ್ರತಿಮ ಫ್ರೀಡಂ ಫೈಟರ್​ಗಳ ರೋಮಾಂಚನಕಾರಿ ಕಥಾನಕ ಆಗಿತ್ತು. ಜೂನಿಯರ್ ಎನ್​ಟಿಆರ್ ಜೊತೆ ರಾಮ್ ಚರಣ್ ತೇಜಾ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಬಣ್ಣ ಹಚ್ಚಿದ್ರು. ವಿಶ್ವದಾದ್ಯಂತ ಈ ಸಿನಿಮಾ 1200 ಕೋಟಿ ಗಳಿಕೆಯಿಂದ ಹೊಸ ದಾಖಲೆ ಬರೆದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES