Sunday, December 22, 2024

ಜೂನಿಯರ್ ಎನ್​ಟಿಆರ್ ಪ್ರಾಜೆಕ್ಟ್​ಗೆ ನೀಲ್ ಮುಹೂರ್ತ

ಇಂಡಿಯನ್ ಸಿನಿದುನಿಯಾದ ಸೆನ್ಸೇಷನಲ್ ಡೈರೆಕ್ಟರ್ ಯಾರು ಅಂದ್ರೆ ರಾಜಮೌಳಿ ಹೆಸ್ರು ಹೇಳ್ತಿದ್ರು. ಇದೀಗ ಅವ್ರಿಗೆ ಕಾಂಪಿಟೇಟರ್ ಆಗಿ ನಮ್ಮ ಪ್ರಶಾಂತ್ ನೀಲ್ ಮಾಸ್ ಎಂಟ್ರಿ ಕೊಟ್ಟಾಗಿದೆ. ಕೆಜಿಎಫ್ ನಂತ್ರ ಸಲಾರ್​ನಲ್ಲಿ ಬ್ಯುಸಿ ಇರೋ ಈ ಮಾನ್​ಸ್ಟರ್ ಡೈರೆಕ್ಟರ್, ತಮ್ಮ ನೆಕ್ಸ್ಟ್ ವೆಂಚರ್ ಯಾವುದು..? ಯಾರ ಜೊತೆ ಅನ್ನೋದ್ರ ಬಗ್ಗೆ ಓಪನ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ.

  • 2023ರ ಏಪ್ರಿಲ್​​ಗೆ ಯಂಗ್ ಟೈಗರ್ ಸಿನಿಮಾ ಕಿಕ್​ಸ್ಟಾರ್ಟ್​
  • KGF ಚಾಪ್ಟರ್- 3 ಸದ್ಯಕ್ಕಿಲ್ಲ.. ಕ್ಯಾಪ್ಟನ್ ನೀಲ್ ಕನ್ಫರ್ಮ್​..!
  • ಆಸ್ಕರ್ ಜೊತೆ NTR​ಗೆ ಸಲಾಂ ಹೇಳೋ ಅಂತಹ ಸಿನಿಮಾ

ಇಡೀ ಭಾರತೀಯ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತಹ ಸಿನಿಮಾ ಮಾಡಬೇಕು ಅನ್ನೋ ಮಹತ್ತರ ಕನಸು ಕಂಡವ್ರು ಪ್ರಶಾಂತ್ ನೀಲ್. ತಾನು ಏನು ಅನ್ನೋದನ್ನ ಪ್ರೂವ್ ಮಾಡೋಕೆ ಅಂತ್ಲೇ ಉಗ್ರಂ ಅನ್ನೋ ಸಿನಿಮಾ ಮಾಡಿ ತೋರಿಸಿದ್ರು. ಅಲ್ಲಿ ಅವ್ರ ನಿರ್ದೇಶನದ ಕೌಶಲ್ಯಗಳ ಜೊತೆ ಕ್ರಿಯೇಟೀವ್ ಮೈಂಡ್​ನ ಎಕ್ಸ್​ಪ್ಲೋರ್ ಮಾಡಿದ್ರು.

ನಂತರದ ಕೆಜಿಎಫ್ ಸಿನಿಮಾ ಮಾಡಿದ ಹಂಗಾಮ ಅಷ್ಟಿಷ್ಟಲ್ಲ. ನರಾಚಿ ಸಾಮ್ರಾಜ್ಯ, ಅದರಲ್ಲಿನ ಚಿನ್ನ, ಅದನ್ನ ಬಗೆಯೋರ ಬದುಕು, ಬವಣೆ, ಅದ್ರ ವ್ಯಾಪಾರ- ವ್ಯವಹಾರ ಹೀಗೆ ಎಲ್ಲವನ್ನೂ ಎಲ್​ಡೊರಾಡೋ ಮೂಲಕ ಹೇಳಿದ ಪರಿ ನಿಜಕ್ಕೂ ಅದ್ವಿತೀಯ. ಅಕ್ಷರಶಃ ಜನ ದಿಲ್​ಖುಷ್ ಆಗಿಬಿಟ್ಟಿದ್ದಾರೆ. ನಿರ್ಮಾಪಕರಿಗೆ ಒಳ್ಳೆಯ ಬ್ಯುಸಿನೆಸ್ ಜೊತೆ ಕನ್ನಡ ಚಿತ್ರರಂಗಕ್ಕೊಂದು ಗೊತ್ತು, ಗುರಿಯನ್ನ ತೋರಿಸಿ, ನ್ಯಾಷನಲ್- ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸ್ಟ್ಯಾಂಡರ್ಡ್​ ಸೆಟ್ ಮಾಡಿಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗವನ್ನು ಪರಭಾಷಾ ಕೋಟೆ, ಕೊತ್ತಲುಗಳಿಗೆ ವಿಸ್ತರಿಸಿರೋ ಪ್ರಶಾಂತ್ ನೀಲ್, ತನ್ನ ವಿಶಿಷ್ಟ ಶೈಲಿಯ ಮೇಕಿಂಗ್​ನಿಂದ ಬಾಲಿವುಡ್ ಹಾಗೂ ಹಾಲಿವುಡ್ ಮೇಕರ್ಸ್​ ನಿದ್ದೆ ಕೆಡಿಸಿದ್ರು. ಇದೀಗ ಪಕ್ಕದ ಟಾಲಿವುಡ್ ಸೂಪರ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್​ನಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಅಂದ್ರೆ ಅದಕ್ಕೆ ನಮ್ಮ ಹೆಮ್ಮೆಯ ಪ್ರೊಡಕ್ಷನ್ ಬ್ಯಾನರ್ ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ಅವ್ರೇ ಬಂಡವಾಳ ಹೂಡಿದ್ದಾರೆ.

ನಿನ್ನೆಯಷ್ಟೇ ಸಲಾರ್ ಸಿನಿಮಾದ ರಿಲೀಸ್ ಡೇಟ್​ನ ಅಫಿಶಿಯಲಿ ಅನೌನ್ಸ್ ಮಾಡೋ ಮೂಲಕ ಅಚ್ಚರಿ ಮೂಡಿಸಿದ್ರು ನೀಲ್. ಹೌದು.. 2023ರ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗೋದು ಪಕ್ಕಾ ಆಯ್ತು. ಅಲ್ಲಿಗೆ ಸಲಾರ್ ಎರಡೆರಡು ಭಾಗಗಳಲ್ಲಿ ಬರಲಿದೆ ಅನ್ನೋದಕ್ಕೆ ಈ ಟೈಮ್ ಗ್ಯಾಪ್ ಪುಷ್ಠಿ ನೀಡಿದಂತಿದೆ. ಮತ್ತೊಂದ್ಕಡೆ ಕೆಜಿಎಫ್ ಚಾಪ್ಟರ್-3 ಸದ್ಯಕ್ಕಂತೂ ಕಿಕ್​ಸ್ಟಾರ್ಟ್​ ಆಗಲ್ಲ ಅನ್ನೋದೂ ಸ್ಪಷ್ಟವಾಗಿದೆ.

ವಿಶೇಷ ಅಂದ್ರೆ ಮಾಧ್ಯಮಗಳ ಮುಂದೆ ಎದುರಾದ ಪ್ರಶಾಂತ್ ನೀಲ್, ಮುಂದಿನ ವರ್ಷ ಏಪ್ರಿಲ್- ಮೇ ವೇಳೆಗೆ ಜೂನಿಯರ್ ಎನ್​ಟಿಆರ್ ಜೊತೆಗಿನ ಸಿನಿಮಾನ ಶುರು ಮಾಡೋದಾಗಿ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಇವರಿಬ್ಬರೂ ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​ನಡಿ ಸಿನಿಮಾ ಮಾಡೋದು ಈ ಹಿಂದೆಯೇ ಕನ್ಫರ್ಮ್​ ಆಗಿತ್ತು. ಆದ್ರೆ ಜೂನಿಯರ್ ಎನ್​ಟಿಆರ್​ ನಟನೆಯ ಆ 31ನೇ ಚಿತ್ರ ಯಾವಾಗ ಅನ್ನೋದಕ್ಕೆ ನೀಲ್ ಉತ್ತರ ಕೊಟ್ಟಿರೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

ಅಷ್ಟೇ ಅಲ್ಲ, ಆಸ್ಕರ್ ಜೊತೆ ಎನ್​ಟಿಆರ್​ಗೆ ಸಲಾಂ ಹೊಡೆಯೋ ಅಂತಹ ಸಿನಿಮಾ ಮಾಡ್ತೀನಿ ಅಂತ ತಮ್ಮ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ ನೀಲ್. ಸಾಲು ಸಾಲು ಹಿಟ್ ಸಿನಿಮಾಗಳಿಂದ ಮಾಸ್ ಕಾ ಬಾಪ್ ಆಗಿರೋ ಯಂಗ್ ಟೈಗರ್, ನೀಲ್ ಇಡೋ ಫ್ರೇಮ್​ಗೆ ಬಣ್ಣ ಹಚ್ಚೋಕೂ ಮುನ್ನ, ಕೊರಟಾಲ ಶಿವ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. ಅದೇನೇ ಇರಲಿ, ನೀಲ್- ಎನ್​ಟಿಆರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚರಿತ್ರೆಯ ಪುಟಗಳು ಸೇರೋ ಅಂತಹ ಮಹಾದೃಶ್ಯಕಾವ್ಯ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES