ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ ಕೊಲಗೈದ ಪೊಲೀಸರ ಚಾರ್ಜ್ ಶೀಟ್ನಲ್ಲಿ ವೀರ ಸಾವರ್ಕರ್ ಏಳನೇ ಆರೋಪಿ ಆಗಿದ್ದ. ಅವರೊಬ್ಬ ಹಿಂದೂವಾದಿ ಅಷ್ಟೇ, ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ.
1915 ಕ್ಕಿಂತ ಮೊದಲು ಹಿಂದೂ ಮಹಾಸಭಾ, ಮುಸ್ಲೀಂ ಲೀಗ್ ಎರಡೂ ಪ್ರಬಲವಾಗಿತ್ತು. ಗಾಂಧಿ ಅಖಾಡಕ್ಕೆ ಇಳಿದಾಗ ಇವರೆಲ್ಲ ವೀಕ್ ಆಗಿದ್ದರು, ಗಾಂಧಿ ಆದರ್ಶವಾದಿ ನಾಯಕ, ಆದರೆ ಸಾವರ್ಕರ್ ಅಲ್ಲ. ಸರ್ಕಾರ
ಏನಾದ್ರೂ ತೀರ್ಮಾನ ಮಾಡುವುದಾದರೆ ರಸ್ತೆಯಲ್ಲಿ ಪಂಚಾಯ್ತಿ ಮಾಡಬೇಕಾಗಿಲ್ಲ. ಹಿಜಾಬ್, ಹಲಾಲ್ ಏನೇ ಇದ್ರು ಕೋರ್ಟ್ಗೆ ಹೋಗಬೇಕು ಎಂದರು.
ಇದೊಂದು ನಾಗರೀಕ ಸರ್ಕಾರ ಅಂತ ಅನಿಸುತ್ತಾ? ಹೀಗಾಗಲೇ ರಾಜ್ಯದಲ್ಲಿ ಮೂರು ಕೊಲೆ ಆಗಿದೆ. ಸ್ಥಳದಲ್ಲಿ ಇರಬೇಕಾದವರು ಸೆರಗಿನ ಹಿಂದೆ ಸೇರ್ಕೋತಾರೆ. ರಾಜ್ಯ ಹೊತ್ತಿ ಉರಿಯುತ್ತಿದ್ದಾಗ ಹೆದರಿಕೊಂಡು ಜ್ಞಾನೇಂದ್ರ ಕೆಡಿಪಿ ಸಭೆ ಮಾಡುತ್ತಿದ್ದರು ಎಂದು ಕಿಡಿಕಾರಿದರು.
ಹೋಂ ಮಿನಿಸ್ಟರ್ರನ್ನು ನೋಡಿಯೇ ಮಾಡಿದ್ದಾರೆ. ಅವರು ಆಡಳಿತ ಮಾಡ್ತಿರೋದು ಜನರಿಗಲ್ಲ. ಗುಡ್ಡೆಕೊಪ್ಪಲು ಗ್ರಾಮ ಪಂಚಾಯ್ತಿಗೆ ಸೀಮಿತವಾಗಿ ಹೋಂ ಮಿನಿಸ್ಟರ್ ಮಾಡೋದು ಒಳ್ಳೇದು ಎಂದು ಮಾಜಿ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.