Monday, December 23, 2024

ಕಲಬುರಗಿ APMCಯಲ್ಲಿ ನಿಲ್ಲದ ಸರಣಿ ಕಳ್ಳತನ..!

ಕಲಬುರಗಿ : ಕಳೆದ ಹಲವಾರು ದಿನಗಳಿಂದ ಕಲಬುರಗಿಯಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದು, ಇದೀಗ ಎಪಿಎಂಸಿಯ ವಿನಾಯಕ ಟ್ರೇಡಿಂಗ್ ಮತ್ತು ವಿಜಯ ಭೀಮಳ್ಳಿ ಟ್ರೇಡಿಂಗ್ ಹೋಲ್‌ಸೇಲ್ ಅಂಗಡಿಗಳಲ್ಲಿ ಸರಣಿ ಕಳ್ಳತನಗಳು ನಡೆದಿವೆ.. ವಿನಾಯಕ ಟ್ರೇಡರ್ಸ್ ಹೋಲ್‌ಸೇಲ್ ಅಂಗಡಿಯಲ್ಲಿ ಟಿನ್‌ಶೆಡ್ ಕೊರೆದು ಒಳನುಗ್ಗಿರುವ ಕಳ್ಳರು, ಕೌಂಟರ್‌ನಲ್ಲಿ ಹಣ ಕದಿಯಲು ಮುಂದಾಗಿದ್ದಾರೆ. ಆಗ ಹಣ ಇಲ್ಲದಿದ್ದಾಗ ಹದಿನೈದು ಕ್ವಿಂಟಾಲ್‌ನಷ್ಟು ತೊಗರಿ ಬೇಳೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅದಲ್ಲದೇ, ಸಿಸಿ ಕ್ಯಾಮೆರಾದ ಮಾನಿಟರ್ ಸಹ ಕದ್ದೊಯ್ದಿದ್ದಾರೆ.

ಇನ್ನು ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ. ಆದರೂ ಕಳ್ಳರು ನಿರಂತರವಾಗಿ ಎಪಿಎಂಸಿಯಲ್ಲಿ ಕಳ್ಳತನ ಮಾಡ್ತಿರೋ ಜೊತೆಗೆ ಅಂಗಡಿಯಲ್ಲಿನ ವಸ್ತುಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಹೀಗಾಗಿ ಕೂಡಲೇ ಎಪಿಎಂಸಿ ಅಧಿಕಾರಿಗಳು ಮತ್ತು ಪೊಲೀಸರು ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಅಂತಾ ವರ್ತಕರು ಆಗ್ರಹಿಸಿದ್ದಾರೆ.
ಅದೇನೇ ಇರಲಿ ಕಲಬುರಗಿಯಲ್ಲಿ ಕಳ್ಳತನ ಪ್ರಕರಣಗಳು ಮಿತಿಮೀರಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Related Articles

TRENDING ARTICLES