Monday, December 23, 2024

ಎಲ್ಲರ ಕಣ್ಮನ ಸೆಳೆದ ನಾಯಿ ದತ್ತು ಶಿಬಿರ

ಧಾರವಾಡ: ಪಶು ಸಂಗೋಪನೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ದೇಸಿ ತಳಿ ನಾಯಿಗಳ ದತ್ತು ಪಡೆಯುವ ಶಿಬಿರ ಎಲ್ಲರ ಕಣ್ಮನ ಸೆಳೆಯಿತು. 25 ಕ್ಕೂ ಹೆಚ್ವು ದೇಸಿ ತಳಿಯ ನಾಯಿಗಳನ್ನು ದತ್ತು ನೀಡಲಾಯ್ತು. ಈ ಮೊದಲೇ ಈ ದೇಸಿ ನಾಯಿಗಳ ದತ್ತು ಪಡೆಯುವ ಬಗ್ಗೆ ಆನ್ ಲೈನ್ ನಲ್ಲಿ ಮಾಹಿತಿ ಬಿಡಲಾಗಿತ್ತು. ವಿಶೇಷತೆ ಏನೆಂದ್ರೆ‌ ಬೇರೆ ತಳಿಯ ನಾಯಿಗಳಿಗೆ ಪೆಡಿಗ್ರಿ ಹಾಗೂ ಅದರದ್ದೇ ಆಹಾರ ಹಾಕಬೇಕು. ಈ ದೇಸಿ ನಾಯಿಗೆ ಹಾಗಲ್ಲ, ನಾವು ಮಾಡುವ ಊಟವನ್ನೇ ಹಾಕಿದರೆ ಸಾಕು, ಅವು ಬದುಕಿ ಬಿಡ್ತಾವೆ ಅಂತಾರೆ ದತ್ತು ಪಡೆದವರು.

ಇನ್ನು ಈ ದೇಸಿ ನಾಯಿ ದತ್ತು ಪಡೆದ ಮೇಲೆ ಅದನ್ನ ಸಾಕುವವರಿಗೆ ಕೂಡಾ ಕೆಲ ನಿಯಮ ಇದೆ. ಅವು ಜೀವಂತ ಇರುವವರೆಗೆ ಅದರ ಜವಾಬ್ದಾರಿ ಹೊರಬೇಕು. ಅದಕ್ಕೆ ಏನೂ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಪಾಲಿಕೆಯಿಂದ ಅದನ್ನು ಸಾಕುವ ಅನುಮತಿ ಪಡೆಯಬೇಕು. ಇದನ್ನು ಸಾಕುವ ಅನುಮತಿ ಈ ಕಾರ್ಯಕ್ರಮ ಆಯೋಜಕರೇ ಪಾಲಿಕೆಯಿಂದ ಕೊಡಿಸಿದ್ದಾರೆ‌.ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು ಕೂಡಾ ಎರಡು ನಾಯಿ ಬುಕ್ ಮಾಡಿಸಿದ್ದಾರೆ.

ಒಟ್ಟಾರೆ ದೇಸಿ ನಾಯಿಗಳನ್ನು ಬೀದಿ ನಾಯಿಗಳೆಂದು ತಾತ್ಸಾರ ಮಾಡೋರ ಮಧ್ಯೆ ಬೀದಿ ನಾಯಿಗಳನ್ನೂ ದತ್ತು ಪಡೆಯೋಕೆ ಜನ ಮುಂದೆ ಬರ್ತಾರೆ ಅನ್ನೋದನ್ನು ತೋರಿಸಿಕೊಡುವಲ್ಲಿ ಈ ಶಿಬಿರ ಯಶಸ್ವಿಯಾಯ್ತು.

ಮುಸ್ತಫಾ ಕುನ್ನಿಭಾವಿ ಪವರ್ ಟಿವಿ ಧಾರವಾಡ

RELATED ARTICLES

Related Articles

TRENDING ARTICLES