ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳದ ಬಳಿಕ ರಾಜ್ಯ ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿದ್ದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಇಂದು ರಾಷ್ಟ್ರೀಯ ಬಿಜೆಪಿ 11 ಜನರನ್ನ ಒಳಗೊಂಡಂತೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ ನೀಡಿ ರಾಷ್ಟ್ರೀಯ ಬಿಜೆಪಿ ಆದೇಶಿಸಿತ್ತು. ಬಿಜೆಪಿಯಲ್ಲಿ ಚುನಾವಣೆ, ಟಿಕೆಟ್ ಹಂಚಿಕೆ, ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯಾಗಿದೆ. ಈ ಬಗ್ಗೆ ಸಿಎಂ ಮಾತನಾಡಿದರು.
ಮುಂಬರುವ 2023 ವಿಧಾನಸಭೆ ಚುನಾವಣೆಯನ್ನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಈ ಬಗ್ಗೆ ನಾನು ಮೊದಲೇ ಹೇಳಿದ್ದೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ದಕ್ಷಿಣ ಭಾರತದಲ್ಲಿ ಅತ್ಯಂತ ಶಕ್ತಿ ಶಾಲಿಯಾಗಿ ಬಿಜೆಪಿ ಪಕ್ಷ ಕಟ್ಟಬೇಕೆಂದು ನಿರ್ಧಾರವಾಗಿತ್ತು. ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಲು ಬಿಎಸ್ವೈ ಮುಂದಾಗಲಿದ್ದಾರೆ ಎಂದರು.
ವಿಶೇಷವಾಗಿ ಕರ್ನಾಟಕದಲ್ಲಿ ಬಿಎಸ್ವೈ ಪಕ್ಷ ಸಂಘಟನೆ ಮಾಡಲಿದ್ದಾರೆ. ಮತ್ತೆ 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದೇವೆ. ನಮ್ಮಗೆ ಶಕ್ತಿ ಸಿಕ್ಕಿದೆ. ವಿರೋಧ ಪಕ್ಷದವರು ಎಷ್ಟೆ ಸರ್ವೇ ಮಾಡಿದ್ದರೂ. ರಾಜ್ಯದ ಜನರ ನಿರೀಕ್ಷೆ ನಮ್ಮ ಮೇಲಿದೆ ಎಂದು ತಿಳಿಸಿದರು.
ರಾಜಕಾರಣ ನಿಂತ ನೀರಲ್ಲ, 2008 ರಾಜಕಾರಣ ಬೇರೆ, 2023 ರಾಜಕಾರಣವೇ ಬೇರೆ, ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಗೊತ್ತಿಲ್ಲ. ಕಾಂಗ್ರೆಸ್ ನವರು ತಾವೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ, ನೆರೆ ಸಂದರ್ಭದಲ್ಲಿ ಸರ್ಕಾರ ಗಟ್ಟಿಯಾಗಿ ನಿಂತಿದೆ. ರಾಜ್ಯದ ಜನರು ನಮ್ಮನ್ನ ಮತ್ತೆ ಒಪ್ಪಿಕೊಳ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಏನೆಲ್ಲಾ ಪ್ರಯತ್ನ ಮಾಡಬೇಕು ಮಾಡುತ್ತೇವೆ. ಸೂಕ್ತ ಸಂದರ್ಭದಲ್ಲಿ ನಾವು ತೀರ್ಮಾನ ತೆಗದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದರು.