Wednesday, January 22, 2025

ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲ‌ಪಡಿಸಿ, ಯಡಿಯೂರಪ್ಪ’ಗೆ ಮೋದಿ ಸಲಹೆ

ಬೆಂಗಳೂರು: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇವಲ‌ ಕರ್ನಾಟಕವಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲ‌ಪಡಿಸಿ ಅಧಿಕಾರಕ್ಕೆ ಕರೆತುರುವ ನಿಟ್ಟಿನಲ್ಲಿ ನಿಮ್ಮ ಶ್ರಮ ಅಗತ್ಯವೆಂದು ಮೋದಿ ಬಿಎಸ್​ವೈಗೆ ಹೇಳಿದ್ದಾರೆ. ಸುಮಾರು ಐದು ನಿಮಿಷಗಳ ಕಾಲ ಪ್ರಧಾನಿ ಮೋದಿ ಜತೆ ಯಡಿಯೂರಪ್ಪ ಮಾತನಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ ನೀಡಿ ರಾಷ್ಟ್ರೀಯ ಬಿಜೆಪಿ ಆದೇಶಿಸಿದೆ. ಬಿಜೆಪಿಯಲ್ಲಿ ಚುನಾವಣೆ, ಟಿಕೆಟ್​ ಹಂಚಿಕೆ, ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ.

RELATED ARTICLES

Related Articles

TRENDING ARTICLES