ನವದೆಹಲಿ: ಸುಮಾರು 200 ಕೋಟಿ ಮೊತ್ತದ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಲ್ಲಿರುವ ಉದ್ಯಮಿ ಬಿಡುಗಡೆ ಮಾಡಿಸೋದಾಗಿ ಹೇಳಿ ಸುಮಾರು ಸುಕೇಶ್ ಚಂದ್ರಶೇಖರ್ ಬರೋಬ್ಬರಿ 215 ಕೋಟಿ ಹಣ ಪೀಕಿದ್ದ, ಉದ್ಯಮಿ ಪತ್ನಿ ಅದಿತಿ ಸಿಂಗ್ ಅವರನ್ನ ನಂಬಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದ ಆರೋಪಿ. ಇದೇ ಹಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ. ಕೋಟಿ ರೂಪಾಯಿ ಬೆಲೆ ಬಾಳುವ ಗಿಫ್ಟ್ ಪಡೆದು ಸಂಕಷ್ಟಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಿಲುಕಿದ್ದಾಳೆ.
ಸುದೀಪ್ ನಟನೆಯ ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಯಾಗಿ ಫರ್ನಾಂಡೀಸ್ ನಟಿಸಿದ್ದರು. ಈ ಸಿನಿಮಾದಲ್ಲಿ ರಾ..ರಾ.. ರುಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಕನ್ನಡಿಗರ ಮನೆ ಮಾತಾಗಿದ್ದರು.
ದೆಹಲಿ ಪೊಲೀಸ್ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಇಡಿ ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಿತು. ಮೊದಲ ಚಾರ್ಜ್‌ಶೀಟ್‌ನಲ್ಲಿ ಚಂದ್ರಶೇಖರ್ ವಂಚಿಸಿದ ಹಣವನ್ನು ಹೇಗೆ ವರ್ಗಾಯಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪೂರಕ ಆರೋಪಪಟ್ಟಿಯಲ್ಲಿ, ಚಂದ್ರಶೇಖರ್ ಅವರು ವಂಚಿಸಿದ ಮೊತ್ತದಿಂದ ಸುಮಾರು 5.71 ಕೋಟಿ ರೂ ಮೌಲ್ಯದ ಉಡುಗೊರೆಗಳನ್ನು ಫರ್ನಾಂಡೀಸ್ ನೀಡಿದ್ದಾರೆ ಎಂದು ಇಡಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಚಂದ್ರಶೇಖರ್ ತಮ್ಮ ಆತ್ಮೀಯ ಪಿಂಕಿ ಇರಾನಿ ಮೂಲಕ ಫರ್ನಾಂಡೀಸ್‌ಗೆ ಈ ಉಡುಗೊರೆಯನ್ನು ತಲುಪಿಸಿದ್ದರು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.