Wednesday, January 22, 2025

ಬಾಲಿವುಡ್ ಸ್ಟಾರ್​​ಗಳು ಪಾಕಿಸ್ತಾನದ ಏಜೆಂಟರ್ : ಶಾಸಕ ಯತ್ನಾಳ್​​

ಬೆಂಗಳೂರು : ಬಾಲಿವುಡ್ ಸ್ಟಾರ್​​ಗಳಾದ ಅಮೀರ್​​ ಖಾನ್​, ಶಾರುಖ್​​ ಖಾನ್, ಸಲ್ಮಾನ ಖಾನ್, ಸೈಫ್​​ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ಶಾಸಕ ಯತ್ನಾಳ್​​ ಕಿಡಿಕಾರಿದರು.

ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಲಾತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್​​, ಹುತ್ತದ ಮೇಲೆ ಹಾಲು ಸುರಿದರೆ ತಪ್ಪು ಎನ್ನುವರು ಮೊಹರಂ ಹಬ್ಬದಲ್ಲಿ ಕುರಿ ಕಡಿಯುವದು ತಪ್ಪು ಅಲ್ವಾ? ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ್​​, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ?, ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್​​ ಚಂದ್ರ ಬೋಸ್ ಎಂದರು. ಗಾಂಧೀಜಿ ಹಠಕ್ಕೆ ಬಿದ್ದ ಕಾರಣ ನೆಹರು ಪ್ರಧಾನಿಯಾದರೇ ಹೊರತು ಯಾರಿಗೂ ಇಷ್ಟವಿರಲಿಲ್ಲ ಎಂದರು.

RELATED ARTICLES

Related Articles

TRENDING ARTICLES