Wednesday, January 22, 2025

ಕಣ್ತುಂಬಿಕೊಳ್ಳಿ ಕ್ಯಾರೆಕ್ಟರ್​ಲೆಸ್ ಧನ್ವೀರ್​ನ ಅಸಲಿ ಖದರ್

ಸ್ಯಾಂಡಲ್​ವುಡ್ ಶೋಕ್ದಾರ್​ ಧನ್ವೀರ್​ ಗೌಡ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಾಮನ. ಇದ್ರ ಫಸ್ಟ್​ ಲುಕ್​​​ಗೆ ಫಿದಾ ಆಗಿದ್ದ ಸಿನಿಪ್ರಿಯರು,​ ಟೀಸರ್ ನೋಡಿ ಮತ್ತಷ್ಟು ಥ್ರಿಲ್ ಆಗಿದ್ದಾರೆ. ಔಟ್ ಅಂಡ್ ಔಟ್ ಆ್ಯಕ್ಷನ್ ವೆಂಚರ್ ಆಗಿರಲಿರೋ ಅದ್ರ​​ ಟೀಸರ್​​ ಯ್ಯೂಟ್ಯೂಬ್​​​ನಲ್ಲಿ ಧೂಳೆಬ್ಬಿಸ್ತಿದೆ. ಇಷ್ಟಕ್ಕೂ ವಾಮನನ ಜಬರ್ದಸ್ತ್​ ಟೀಸರ್​​ ಹೇಗಿದೆ ಅಂತ ನೀವೇ ಓದೆ.

  • ಮೊದಲ ನೋಟದಲ್ಲೇ ವಾಮನನ ಜಬರ್ದಸ್ತ್​ ನ್ಯೂ ಲುಕ್​​​​

ಆ್ಯಕ್ಷನ್​ ಮೂಡ್​ನಲ್ಲಿರೋ ಧನ್ವೀರ್​​​​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ವಾಮನ. ಈ ಮುಂಚೆಯೇ ವಾಮನನ ಅವತಾರದಲ್ಲಿ ತೆರೆಯ ಮೇಲೆ ಬರೋದಾಗಿ ಸುಳಿವು ಕೊಟ್ಟಿದ್ದ ಧನ್ವೀರ್​​ ಇದೀಗ ನೆಕ್ಸ್ಟ್​ ಲೆವೆಲ್​ ಆ್ಯಕ್ಷನ್​​ ಅವತಾರದಲ್ಲಿ ಮಿಂಚಿದ್ದಾರೆ. ಬಲಿಚಕ್ರವರ್ತಿಯನ್ನು ಸಂಹಾರ ಮಾಡಿ ಪಾತಾಳಕ್ಕೆ ತಳ್ಳಿದ ವಾಮನನ ಪವಾಡ ನಿಮಗೆಲ್ಲಾ ಗೊತ್ತಿದೆ. ವಾಮನ ತ್ರಿವಿಕ್ರಮನಾಗಿ ಬೆಳೆದ ವಿಷ್ಣುವಿನ ಅವತಾರ ಪುರಾಣ ಕಥೆಯೂ ಗೊತ್ತಿದೆ. ಇದೀಗ ಧನ್ವೀರ್​ ವಾಮನನಾಗಿ ಜಬರ್ದಸ್​​ ಮಾಸ್​ ಲುಕ್​​ನಲ್ಲಿ ಮಿಂಚ್ತಾ ಇದ್ದಾರೆ.

ಧನ್ವೀರ್​ ಗೌಡ ಭರ್ಜರಿ ಆ್ಯಕ್ಷನ್​​ ಮಾಡ್ತಾ ನಯಾ ಗೆಟಪ್​​ನಲ್ಲಿ ಕಾಣಿಸ್ತಾ ಇದ್ದಾರೆ. ಅದ್ದೂರಿ ಸೆಟ್​​, ಬ್ಯಾಕ್​​​ಗ್ರೌಂಡ್​ ಮ್ಯೂಸಿಕ್​, ವಿಷ್ಯುಯೆಲ್​ ಎಫೆಕ್ಟ್​​, ಸೌಂಡಿಂಗ್​​​ ಎಲ್ಲಾ ಸಖತ್​ ಇಂಪ್ರೆಸ್ಸಿವ್ ಆಗಿದ್ದು ಸೋಶಿಯಲ್​​ ಮೀಡಿಯಾಗಳಲ್ಲಿ ಟಾಪ್​ ಟ್ರೆಂಡಿಂಗ್​​ನಲ್ಲಿದೆ. ವಾಮನನ ಅವತಾರದಲ್ಲಿ ಪಂಚಿಂಗ್​ ಡೈಲಾಗ್​ ಹೊಡೆಯುತ್ತಾ ಧನ್ವೀರ್​ ರಗಡ್​​​ ಲುಕ್​ನಲ್ಲಿ ಕಾಣುತ್ತಾರೆ. ಒಂದು ನಿಮಿಷ 50ಸೆಕೆಂಡುಗಳ ಕಾಲ ಇರೋ ವಾಮನ ಟೀಸರ್​​ ಸಿನಿಮಾ ಕುರಿತು ಕ್ಯೂರಿಯಾಸಿಟಿ ಮೂಡಿಸಿದೆ.

  • ಹೈ ವೋಲ್ಟೇಜ್ ಮಾಸ್ & ಌಕ್ಷನ್ ಹೀರೋ ಆಗಿ ಧನ್ವೀರ್..!
  • ಶೋಕ್ದಾರ್​​ ತೆಕ್ಕೆಗೆ ಏಕ್​ ಲವ್​ ಯಾ ಬೆಡಗಿ ರೀಷ್ಮಾ ನಾಣಯ್ಯ​​​

ಬಜಾರ್​, ಬೈ ಟು ಲವ್ ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಎದೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಟ್ಯಾಲೆಂಟೆಡ್​ ಆ್ಯಕ್ಟರ್​​ ಧನ್ವೀರ್​ ಗೌಡ. ಹೈಟು, ವೈಟು, ಫಿಟ್​​ನೆಸ್​​ನಲ್ಲಿ ಹ್ಯಾಂಡ್ಸಮ್​ ಆಗಿರೋ ಧನ್ವೀರ್​ ಪಕ್ಕಾ ಮಾಸ್​ ರೋಲ್​​ಗಳಿಗೆ ಸ್ಯೂಟ್​ ಆಗುತ್ತಾರೆ. ಜತೆಗೆ ಇವ್ರ ಆ್ಯಕ್ಟಿಂಗ್​ ಕೂಡ ಸಾಥ್​ ಕೊಡ್ತಾ ಇದ್ದು ಸ್ಯಾಂಡಲ್​ವುಡ್​​ನಲ್ಲಿ ಅದ್ಭುತ ನಟನಾಗಿ ಭರವಸೆ ಮೂಡಿಸಿದ್ದಾರೆ. ನಿರ್ದೇಶಕ ಶಂಕರ್​ ರಾಮನ್​ ಆ್ಯಕ್ಷನ್​ ಕಟ್​ ಹೇಳ್ತಾ ಇರೋ ವಾಮನ ಚಿತ್ರವನ್ನು ಚೇತನ್​ಕುಮಾರ್​ ನಿರ್ಮಾಣ ಮಾಡ್ತಿದ್ದಾರೆ. ಇಡೀ ಚಿತ್ರತಂಡ ಸಖತ್​ ಡೆಡಿಕೇಷನ್​​ನಿಂದ ಸಿನಿಮಾ ನಿರ್ಮಾಣ ಮಾಡ್ತಿದೆ.

ಬಹುದಿನಗಳಿಂದ ಕನಸಾಗಿ ಉಳಿದಿದ್ದ ವಾಮನ ಚಿತ್ರವನ್ನು ಚೇತನ್​ಕುಮಾರ್​ ಶ್ರದ್ಧೆಯಿಂದ ನಿರ್ಮಾಣ ಮಾಡ್ತಿದ್ದು, ತೆರೆಯ ಮೇಲೆ ರಿಚ್ ಆಗಿ ತೋರಿಸೋಕೆ ಪ್ಲಾನ್ ಮಾಡಿಕೊಂಡಿದೆ. ಜತೆಗೆ ವಾಮನನ ಜತೆ ಡ್ಯುಯೆಟ್​ ಆಡೋಕೆ ಏಕ್​ ಲವ್​​ ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸದ್ಯ ರಿಲೀಸ್​ ಆಗಿರೋ ಟೀಸರ್​ನಲ್ಲಿ ಕ್ಯಾರೆಕ್ಟರ್​​ಲೆಸ್​ ಹುಡ್ಗನಾಗಿ ಧನ್ವೀರ್​ ಮಿಂಚ್ತಿದ್ದಾರೆ. ವಾಮನ ಚಿತ್ರದಲ್ಲಿ ಗುಣ ಹೆಸ್ರಿನ ರೋಲ್​ ಲೀಡ್​ ಮಾಡ್ತಿದ್ದು, ರೌಡಿಗಳ ರುಂಡ ಚೆಂಡಾಡೋ ದೃಶ್ಯಗಳಿವೆ.

ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಖಳನಾಯಕನಾಗಿ ಸಂಪತ್ ನಟಿಸುತ್ತಿದ್ದು, ಉಳಿದಂತೆ ಅಚ್ಯುತ್ ಕುಮಾರ್, ತಾರಾ, ಶಿವರಾಜ್ ಕೆ ಆರ್ ಪೇಟೆ ಮತ್ತು ಕಾಕ್ರೋಚ್ ಸುದಿ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಕೈಚಳಕ, ಸುರೇಶ್ ಆರ್ಮುಗ ಸಂಕಲನ, ಅರ್ಜುನ್ ರಾಜ್ ಆಕ್ಷನ್ ಸಿನಿಮಾಕ್ಕಿದೆ. ಆಂತೂ ಟೀಸರ್​ನಿಂದ್ಲೆ ಹೈಪ್​ ಕ್ರಿಯೇಟ್​ ಮಾಡಿರೋ ವಾಮನನ ಅಬ್ಬರ ಮುಂದೆ ಹೇಗಿರುತ್ತೆ ಅನ್ನೋದನ್ನು ಕಾದು ನೋಡ್ಬೇಕು.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES