Wednesday, January 22, 2025

2011’ರ ವಿಶ್ವಕಪ್​ ಹಿರೋ ‘ಓಬ್ರಿಯಾನ’ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ.!

ನವದೆಹಲಿ : 2011 ರ ಏಕದಿನ ವಿಶ್ವಕಪ್​ನಲ್ಲಿ ಕ್ರಿಕೆಟ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಅತೀ ವೇಗದ ಶತಕ ಸಿಡಿಸಿದ್ದ ಕೇವಿನ್ ಓಬ್ರಿಯಾನ ಇಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ ಬೈ ಹೇಳಿದ್ದಾರೆ.

ನಿವೃತ್ತಿ ಕುರಿತು ಟ್ವೀಟ್​ನಲ್ಲಿ ಹಂಚಿಕೊಂಡ ಕೇವಿನ್ ಓಬ್ರಿಯಾನ, ನನ್ನ ಸುದೀರ್ಘ 16 ವರ್ಷದ ಕ್ರಿಕೆಟ್​ಗೆ ಇಂದಿನಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಜೂನ್ 2006ರಲ್ಲಿ ಕ್ರಿಕೆಟ್​ ಜೀವನಕ್ಕೆ ಪಾದರ್ಪಣೆ ಮಾಡಿದ್ದರು.

38 ವರ್ಷದ ಕೆವಿನ್ ಓಬ್ರಿಯಾನ್ ಐರ್ಲೆಂಡ್ ಪರ 3 ಟೆಸ್ಟ್, 153 ಏಕದಿನ ಮತ್ತು 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನಾನು ಮುಂದಿನ ದಿನಗಳಲ್ಲಿ ಐರ್ಲೆಂಡ್‌ನಲ್ಲಿ ಕ್ರಿಕೆಟ್​ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸುತ್ತೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES