Sunday, December 22, 2024

ಹೊಂಬಾಳೆಯಿಂದ ಡಬಲ್ ಧಮಾಕ.. ಸಲಾರ್ ಸೆನ್ಸೇಷನ್

ಕೆಜಿಎಫ್​ನಂತಹ ವರ್ಲ್ಡ್​ ಕ್ಲಾಸ್ ಸಿನಿಮಾನ ವಿಶ್ವ ಸಿನಿದುನಿಯಾಗೆ ಕಾಣಿಕೆಯಾಗಿ ಕೊಟ್ಟಂತಹ ಹೊಂಬಾಳೆ ಫಿಲಂಸ್, ಇಂಡಿಪೆಂಡೆನ್ಸ್ ಡೇ ಸ್ಪೆಷಲ್ ಎರಡೆರಡು ಗುಡ್ ನ್ಯೂಸ್ ಕೊಟ್ಟಿದೆ. ಒಂದು ಇಡೀ ಭಾರತೀಯ ಚಿತ್ರರಂಗ ಎದುರು ನೋಡ್ತಿರೋ ಸಲಾರ್ ರಿಲೀಸ್ ಡೇಟ್ ಆದ್ರೆ, ಮತ್ತೊಂದು ಕಾಂತಾರ ಆಲ್ಬಮ್​ನ ಫಸ್ಟ್ ವಿಡಿಯೋ ಸಾಂಗ್.

  • ಸಲಾರ್​ನ ನೋಡೋಕೆ ಇನ್ನೂ ಒಂದು ವರ್ಷ ಕಾಯ್ಲೇಬೇಕು

ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಹಾಗೂ ಮೇಕರ್ ವಿಜಯ್ ಕಿರಗಂದೂರ್ ಜುಗಲ್ಬಂದಿಯಲ್ಲಿ ಬರ್ತಿರೋ ಮತ್ತೊಂದು ಮಹೋನ್ನತ ಚಿತ್ರ ಸಲಾರ್. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿ, ಕ್ರೇಜ್ ಹುಟ್ಟಿಸಿರೋ ಮಾನ್​ಸ್ಟರ್ ಡೈರೆಕ್ಟರ್, ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಯುಗವನ್ನು ಶುಭಾರಂಭಿಸೋ ಸೂಚನೆ ಕೊಟ್ಟಿದ್ದಾರೆ.

ಈ ಮೆಗಾ ಕಾಂಬೋ ಒಂದಾದಾಗಿನಿಂದ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಂತೆ ಬೆಳೆಯುತ್ತಾ ಹೋಗ್ತಿದೆ. ಆದ್ರೆ ಇಲ್ಲಿಯವರೆಗೆ ಸಿನಿಮಾದ ಯಾವುದೇ ವಿಡಿಯೋ ಝಲಕ್​ಗಳನ್ನ ಬಿಟ್ಟುಕೊಟ್ಟಿಲ್ಲ ಟೀಂ. ಜಸ್ಟ್ ಸ್ಟಿಲ್ ಫೋಟೋಸ್ ಹಾಗೂ ಕ್ಯಾರೆಕ್ಟರ್ ಲುಕ್ಸ್​ನಿಂದಲೇ ಧೂಳೆಬ್ಬಿಸಿರೋ ಸಲಾರ್, ಇದೀಗ ಸ್ವತಂತ್ರ್ಯೋತ್ಸವದ ವಿಶೇಷ ರಿಲೀಸ್ ಡೇಟ್​ನ ಅನ್ಸ್ ಮಾಡಿದೆ.

ಯೆಸ್.. ನೀಲ್ ಹಾಗೂ ಪ್ರಭಾಸ್ ಡೆಡ್ಲಿ & ಡೇರಿಂಗ್ ಕಾಂಬಿನೇಷನ್​ನ ಸಲಾರ್ 2023ರ ಸೆಪ್ಟೆಂಬರ್ 28ಕ್ಕೆ ತೆರೆಗಪ್ಪಳಿಸಲಿದೆಯಂತೆ. ಓ ಮೈ ಗಾಡ್.. ಇನ್ನೂ ಒಂದು ವರ್ಷ ಕಾಯಬೇಕಾ ಅಂತ ಹುಬ್ಬೇರಿಸಬೇಡಿ. ಕಾರಣ ಇದು ಕೆಜಿಎಫ್ ರೀತಿ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ ಅನ್ನೋದು ಇನ್​ಸೈಡ್ ಮಾಹಿತಿ. ಒಟ್ಟಾರೆ ಸಲಾರ್​ ಬಾಕ್ಸ್ ಆಫೀಸ್ ಅಖಾಡಕ್ಕೆ ಇಳಿಯೋಕೆ ಕನಿಷ್ಟ ಒಂದು ವರ್ಷವಂತೂ ಬೇಕೇ ಬೇಕು.

  • ರಿಷಬ್ ಶೆಟ್ರ ಕಾಂತಾರ ಆಲ್ಬಮ್​ನ ಫಸ್ಟ್ ಸಾಂಗ್ ಔಟ್..!
  • ಕರಾವಳಿ ಸೊಗಡಲ್ಲಿ ಶಿವ- ಲೀಲಾರ ಸಿಂಗಾರ ಸಿರಿ ಸೊಬಗು

ಯೆಸ್.. ಇದು ಕಾಂತಾರ ಚಿತ್ರದ ಫಸ್ಟ್ ಸಾಂಗ್. ಇಲ್ಲಿಯವರೆಗೆ ಟೀಸರ್​ನಿಂದ ಸಿಕ್ಕಾಪಟ್ಟೆ ಭರವಸೆ ಮೂಡಿಸಿದ್ದ ಕಾಂತಾರ ಚಿತ್ರ, ಇದೀಗ ಹಾಡಿನ ಝಲಕ್​ನಿಂದ ಸಿನಿಮಾದ ಅಸಲಿಯತ್ತು ಪರಿಚಯಿಸಿದೆ. ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿಯೇ ನಟಿಸಿ, ನಿರ್ದೇಶಿಸಿರೋ ಕಾಂತಾರ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ವಿನೂತನ ಎಕ್ಸ್​ಪೆರಿಮೆಂಟ್ ಆಗಲಿದೆ.

ಕರಾವಳಿಯ ದಟ್ಟ ಕಾಡಲ್ಲಿ ಚಿತ್ರಿತವಾಗಿರೋ ಈ ಸಿನಿಮಾ ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧವನ್ನು ಸಾರಲಿದೆ. ಅದ್ರಲ್ಲೂ ಕರಾವಳಿಯ ಸೊಗಡು ಹಾಗೂ ಸೊಬಗನ್ನ ಈ ಸಿಂಗಾರ ಸಿರಿಯೇ ಅನ್ನೋ ಒಂದು ಹಾಡಿನ ಮೂಲಕ ಗೊತ್ತು ಮಾಡೋ ಸಾಹಸ ಮಾಡಲಾಗಿದೆ. ವಿಜಯ್ ಪ್ರಕಾಶ್ ಹಾಗೂ ಅನನ್ಯಾ ಭಟ್ ಗಾಯನದಲ್ಲಿ ಈ ಹಾಡು ಕೇಳೋಕೆ ಸಖತ್ ಮಜಭೂತಾಗಿದೆ.

ರಿಷಬ್ ಶೆಟ್ರ ಡಿಫರೆಂಟ್ ಸ್ಟೈಲು, ಮ್ಯಾನರಿಸಂ ಮತ್ತೊಮ್ಮೆ ಈ ಚಿತ್ರದಲ್ಲಿ ಎಕ್ಸ್​ಪ್ಲೋರ್ ಆಗಿದ್ದು, ಪ್ರಮೋದ್ ಮರವಂತೆ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕ ಮೆಚ್ಚುವಂತಿದೆ. ಹಾಡಿನಲ್ಲಿ ರಿಷಬ್​ಗೆ ಪ್ರಮೋದ್ ಶೆಟ್ಟಿ ಜೊತೆ ಸಪ್ತಮಿ ಸಾಥ್ ನೀಡಿದ್ದು, ಇವ್ರ ಕೆಮಿಸ್ಟ್ರಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES