ಬೆಂಗಳೂರು : ನಾವು ಈಗಾಗಲೇ ಪೋಲಿಸ್ ಮತ್ತು ಫಾರೆಸ್ಟ್ ಇಲಾಖೆಗಳಲ್ಲಿ 2% ಕ್ರೀಡಾ ಮೀಸಲಾತಿ ನೀಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾ ಮನೋಭಾವದಿಂದ ಮನುಷ್ಯನಿಗೆ ಶಿಸ್ತು ಬರುತ್ತದೆ. ಶಿಸ್ತು,ಕ್ರೀಡೆಯಿಂದ ಒಂದು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಗೆಲ್ಲಬೇಕು ಅಂತ ಆಡೋದು,ಸೋಲಬಾರದು ಅಂತ ಆಡೋದು ಹೀಗೆ ಎರಡು ರೀತಿ ಆಟ ಆಡೋರು ಇರ್ತಾರೆ ಎಂದರು.
ಇನ್ನು, ನಮ್ಮ ರಾಜ್ಯದಲ್ಲಿ ಅನೇಕ ಕ್ರೀಡಾಪಟುಗಳಿದ್ದಾರೆ. 75 ಜನರ ದತ್ತು ಯೋಜನೆ ಯಾಕೆ ಮಾಡಿದೆ ಅಂದ್ರೆ ನಮ್ಮ ಯುವಕರ ಮೇಲೆ ನನಗೆ ಸಾಕಷ್ಟು ನಂಬಿಕೆ ಇದೆ,ಅವ್ರಿಗೆ ಸ್ವಲ್ಪ ಪ್ರೋತ್ಸಾಹ ನೀಡಬೇಕು ಎಂದು ನಾನು ನಿರ್ಧರಿಸಿದ್ದೆ. ಸರ್ಕಾರ ಏನೇನು ಕೊಟ್ಟಿದೆ ಅಂತ ನೀವು ಕೂಡ ಯೋಚನೆ ಮಾಡಬೇಕು. ಕೆಲಸಕ್ಕಾಗಿ ನೀವು ಆಟಬಾರದು. ದೇಶಕ್ಕೋಸ್ಕರ ಆಟ ಆಡಿ. ನಿಮ್ಮ ಆತಂಕ, ಭಯ ನನಗೆ ಅರ್ಥ ಆಗುತ್ತೆ ಅದಕ್ಕೆ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ. ನಾವು ಈಗಾಗಲೇ ಪೋಲಿಸ್ ಮತ್ತು ಫಾರೆಸ್ಟ್ ಇಲಾಖೆಗಳಲ್ಲಿ 2% ಕ್ರೀಡಾ ಮೀಸಲಾತಿ ನೀಡಿದ್ದೇವೆ ಎಂದರು.
ಅದಲ್ಲದೇ, ಮುಂದೆ ಎಲ್ಲಾ ಇಲಾಖೆಗಳಿಗೂ ವಿಸ್ತರಣೆ ಮಾಡಿ 2% ಕ್ರೀಡಾ ಮೀಸಲಾತಿ ನೀಡ್ತಿವಿ. ಬ್ಯಾಸ್ಕೆಟ್‌ಬಾಲ್ ಅನ್ನು ರಾಜ್ಯದ ಕ್ರೀಡಾ ಪ್ರೋತ್ಸಾಹಕ್ಕೆ ಆಯ್ಕೆ ಮಾಡಿದೆ. ಇನ್ನು ಕೆಲವೆ ತಿಂಗಳಲ್ಲಿ ಗ್ರಾಮೀಣ ಕ್ರೀಡಾಕೂಟ ಕೂಡ ನಡೆಯಲಿದೆ ಎಂದು ಹೇಳಿದರು.