Monday, December 23, 2024

ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ಅಮೇರಿಕಾ ಅಧ್ಯಕ್ಷ ಬೈಡನ್

ಅಮೇರಿಕಾ: ಅಗಸ್ಟ್​ 15 ಇಂದು ದೇಶದ ಸ್ವಾತಂತ್ರ್ಯೋತ್ಸವ ಹಿನ್ನಲೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದ್ದಾರೆ.

ಭಾರತ ಹಾಗೂ ಅಮೆರಿಕ ಆತ್ಮೀಯ ಪಾಲುದಾರರಾಗಿದ್ದು, ಮುಂದಿನ ವರ್ಷಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತದ 75ನೇ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದರು.

1947ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತ್ಯವನ್ನು ಆಚರಿಸುವ ಭಾರತ ತನ್ನ 75 ನೇ ಸ್ವಾತಂತ್ರ‍್ಯದ ವರ್ಷವನ್ನು ಆಚರಿಸುತ್ತಿದೆ. ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ನಿರಂತರ ಸಂದೇಶವನ್ನು ನೀಡಿ, ಮಾರ್ಗದರ್ಶನ ಮಾಡಿದ್ದಾರೆ. ಈ ಪ್ರಜಾಸತ್ತಾತ್ಮಕ ಪ್ರಯಾಣವನ್ನು ಗೌರವಿಸಲು ಅಮೆರಿಕ ಭಾರತದೊಂದಿಗಿದೆ ಎಂದು ಹೇಳಿದರು.

ಉಭಯ ರಾಷ್ಟ್ರಗಳ ಒಗ್ಗಟ್ಟು ಅಮೆರಿಕವನ್ನು ಇನ್ನೂ ಹೆಚ್ಚು ನವೀನ, ಅಂತರ್ಗತ ಹಾಗೂ ಬಲಿಷ್ಠವಾದ ರಾಷ್ಟ್ರವನ್ನಾಗಿ ಮಾಡಿದೆ ಎಂದು ಬೈಡೆನ್ ಕೊಂಡಾಡಿದರು.

RELATED ARTICLES

Related Articles

TRENDING ARTICLES