Thursday, January 9, 2025

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ: ಒಬ್ಬರಿಗೆ ಚಾಕು ಇರಿತ.!

ಶಿವಮೊಗ್ಗ :ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಜಿಲ್ಲೆಯ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ಗುಂಪಿನ ನಡುವೆ ನಡೆದ ಜಟಾಪಟಿ ಗಲಾಟೆಗೆ ತಿರುಗಿದೆ. ಈ ವರೆಗೂ ಒಬ್ಬರಿಗೆ ಚಾಕು ಇರಿಯಲಾಗಿದೆ.

ಅನ್ಯಕೋಮಿನ ಗುಂಪಿನಿಂದ ಪ್ರೇಮ್ ಸಿಂಗ್ (26) ಚಾಕು ಇರಿಯಲಾಗಿದೆ. ಈ ಘಟನೆ ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಜನರು ಗುಂಪು ಕೂಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಶಿವಮೊಗ್ಗಕ್ಕೆ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಆಗಮಿಸಿದ್ದು, ಎಸ್ ಪಿ ಲಕ್ಷ್ಮಿ ಪ್ರಸಾದ್ ರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿ ಸೆಲ್ವಮಣಿ, ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ನಗರದಲ್ಲಿ ಪ್ಲೆಕ್ಸ್ ಅಳವಡಿಕೆ ನಿರ್ಬಂಧ ವಿದಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES