ಗದಗ : ಬೆಟಗೇರಿಯ ಟರ್ನಲ್ ಪೇಟೆ ಮನೆಯಲ್ಲಿ ವಾಸವಾಗಿರೋ, ಮಹಾತ್ಮ ಗಾಂಧಿಜಿ ಒಡನಾಡಿ 103 ವರ್ಷದ ಶತಾಯುಷಿ ಅಜ್ಜಿ ಶಾಂತಾಬಾಯಿ ವರ್ಣೇಕರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಜ್ಜಿಯ ಸ್ವಾತಂತ್ರ್ಯದ ಹೋರಾಟ ಕ್ಷಣಗಳ ಕಥೆ ಕೇಳಿದ್ರೆ ಎದೆ ಝಲ್ ಎನ್ನುತ್ತೆ,ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಗಟ್ಟಿಗಿತ್ತಿ, ಕೆಂಪು ಕುನ್ನಿಗಳ ಕಣ್ಣಿಗೆ ಬೀಳದಂತೆ ಕದ್ದುಮುಚ್ಚಿ ಗಾಂಧೀಜಿ ಅವ್ರಿಗೆ ಅನ್ನ, ನೀರು ಪೂರೈಕೆ ಮಾಡಿದ ಬಾಲಕಿ ಈ ಶತಾಯುಷಿ ಅಜ್ಜಿ.ಈ ಶತಾಯುಷಿ ಅಜ್ಜಿಯ ಒಂದೊಂದು ಮಾತು ಕೇಳಿದ್ರೆ ರಕ್ತ ಕುದಿಯುತ್ತೆ. ಮೂಲತಃ ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಅಡಿಗೋಡ ಗ್ರಾಮದ ಹೋರಾಟಗಾರ್ತಿ, ಸುಮಾರು 60 ವರ್ಷಗಳಿಂದ ಗದಗ ನಗರದ ಬೆಟಗೇರಿಯ ಟರ್ನಲ್ ಪೇಠೆಯಲ್ಲಿ ವಾಸವಾಗಿದ್ದಾರೆ.
ಬ್ರಿಟಿಷರು ಉಪ್ಪಿನ ಮೇಲೆ ಕರ ಹಾಕಿದ್ದಕ್ಕೆ ಗಾಂಧೀಜಿಯವ್ರು ಉಪ್ಪಿನ ಚಳುವಳಿ ನಡೆಸಿದ್ದರು.ಆಗ ಅಂಕೋಲಾ ತಾಲೂಕಿನ ಅಡಿಗೋಡ ಗ್ರಾಮದ ಅನಂತ ಸೇಠ ಮನೆಗೆ ಆಗಮಿಸಿದ್ರು.ತೋಟದ ಮನೆಯಲ್ಲಿ ಗಾಂಧೀಜಿ ಹಾಗೂ ಸಂಗಡಿಗರು ಆರು ದಿನಗಳ ಕಾಲ ವಾಸ್ತವ್ಯ ಮಾಡಿದ್ದರು. ಗಾಂಧೀಜಿಗೆ ಸಾಹಾಯ ಮಾಡಿದ್ರೆ ಬ್ರಿಟಿಷ್ ಅಧಿಕಾರಿಗಳು ಸುಮ್ಮನೆ ಬಿಡ್ತಾಯಿಲ್ಲವಂತೆ. ಹೀಗಾಗಿ ಶಾಂತಾಬಾಯಿ ಹಾಗೂ ಕುಟುಂಬದ ಸದಸ್ಯರು ಗಾಂಧೀಜಿ ತಂಗಿದ್ದ ತೋಟಕ್ಕೆ ಕದ್ದುಮುಚ್ಚಿ ಚಹಾ, ಉಪಹಾರ, ಹಾಗೂ ಊಟವನ್ನು ನೀಡುತ್ತಿದ್ದರಂತೆ ಈ ಶತಾಯುಷಿ ಅಜ್ಜಿ. ಈವಾಗ 75 ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಶಾಂತಾಬಾಯಿ ವರ್ಣೀಕರ್ ಭಾಗಿಯಾಗಿದ್ದಾರೆ.