Wednesday, January 22, 2025

ಸೈನಿಕರ ತ್ಯಾಗದಿಂದ ಸ್ವಾತಂತ್ರ್ಯ ಉಳಿದಿದೆ : ನಳೀನ್ ಕುಮಾರ್ ಕಟೀಲ್

ಬೆಂಗಳೂರು : 1857ರ ಮೊದಲ ಸ್ವಾತಂತ್ರ್ಯ ಮಗ್ರಾಮದ ನಂತರ ತಾತ್ಯಾ ಟೋಪಿ, ಮಂಗಲ್ ಪಾಂಡೆ ಹೋರಾಟ ಸ್ವಾತಂತ್ರ್ಯಕ್ಕೆ ದಿಕ್ಸೂಚಿಯಾಯ್ತು ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ದಿನದಂದು. ಗುಲಾಮಗಿರಿಯಿಂದ ತಾಯಿ ಭಾರತಿಯನ್ನ ರಕ್ಷಿಸೋಣ. ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. 75ವರ್ಷ ಸೈನಿಕರ ತ್ಯಾಗದಿಂದ ಸ್ವಾತಂತ್ರ್ಯ ಉಳಿದಿದೆ. ಹುತಾತ್ಮ ಯೋದರಿಗೆ ಪ್ರಣಾಮ‌ ಸಲ್ಲಿಸುತ್ತೇನೆ. 250ವರ್ಷ ಮೊಗಲರು, ಬ್ರಿಟೀಷರು ಆಕ್ರಮಣ ಮಾಡಿದ್ರು. 1857ರ ಮೊದಲ ಸ್ವಾತಂತ್ರ್ಯ ಮಗ್ರಾಮದ ನಂತರ ತಾತ್ಯಾ ಟೋಪಿ, ಮಂಗಲ್ ಪಾಂಡೆ ಹೋರಾಟ ಸ್ವಾತಂತ್ರ್ಯಕ್ಕೆ ದಿಕ್ಸೂಚಿಯಾಯ್ತು ಎಂದರು.

ಇನ್ನು, ಕಾಂತ್ರಿಕಾರಿ ಪುರುಷರ ಹೊಇರಾಟ, ನಿರಂತರ ಬಲಿದಾನ ಸ್ವಾತಂತ್ರ್ಯಕ್ಕೆ‌ ಕಾರಣವಾಯ್ತು. ಮಹಾತ್ಮಾ ಗಾಂಧಿ ಅವರ ಅಹಿಂಸಾ ಹೋರಾಟ ಪ್ರೇರಣೆ ನೀಡಿತು. ಬಂಕಿಮ ಚಂದ್ರ ಚಟರ್ಜಿಯವರ ಒಂದೇ ಮಾತರಂ ಪ್ರತಿಯೊಬ್ಬ ನಾಗರೀಕರ ಒಗ್ಗೂಡಿಸಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಮತ, ಪಂತ ಮೀರಿ‌ ಒಗ್ಗೂಡಿಸಿತು. ಗಾಂಧೀಜಿ ರಾಮರಾಜ್ಯ ಪರಿಕಲ್ಪನೆ ಕಂಡ್ರು ಅದಕ್ಕಾಗಿ ರಾಮಮಂದಿರ ನಿರ್ಮಾಣ ಪರಿಕಲ್ಪನೆ ಕಂಡರು. ಹಳ್ಳಿಯಲ್ಲಿರೋ ಜನರಲ್ಲೂ ರಾಮಮಂದಿರ ಜಪ ಮಾಡಿಸಿತು ಎಂದು ಹೇಳಿದರು.

ಅದಲ್ಲದೇ, ಧಾರ್ಮಿಕ ಭಾವನೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪರಿಕಲ್ಪನೆ ನೀಡಿತು. ಐಕ್ಯತೆಯೊಂದಿಗೆ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ತಿರಂಗ ನಮ್ಮನ್ನ ಒಗ್ಗೂಡುವಂತೆ ಮಾಡಿದೆ. ತಿರಂಗ ಯಾತ್ರೆ ರಾಷ್ಟ್ರವನ್ನ ಹೇಗೆ ಒಗ್ಗೂಡಿಸುವಂತೆ ಮಾಡಿದೆ. ಯುದ್ದವಾದಾಗ, ಕ್ರಿಕೆಟ್ ಆಡುವಾಗ ತಿರಂಗ ಒಗ್ಗೂಡಿಸಿದೆ. ಕೆಲವು ಬಾರಿ ತಿರಂಗ ಹಾರಿಸಲು ಕೂಡ ವಿರೋಧ ವ್ಯಕ್ತವಾಯಿತು. ತಿರಂಗ ಹಾರಿಸಲು ಬೇರೆ ದೇಶಗಳೂ ಗೌರವಿಸಿದೆ. ಒಂದೇ ಮಾತರಂ ಹೇಗೆ ಎಲ್ಲರನ್ನ ಒಗ್ಗೂಡಿಸಿತೋ, ಹಾಗೆ ತಿರಂಗ ಯಾತ್ರೆ ನಮ್ಮೆಲ್ಲರನ್ನೂ ಮತ್ತೆ ಒಗ್ಗೂಡಿಸಲಿ. ಮುಂದೆ ಬರುವ ಅಮೃತ ಕಾಲ, ಪ್ರತಿಯೊಬ್ಬ ನಾಗರೀಕನು ಭಾಗಿಯಾಗಬೇಕು. ಇನ್ನು 25 ವರ್ಷಗಳ ಕಾಲ ಯಶಸ್ವಿಯಾಗಿ ಹೆಜ್ಜೆ ಹಾಕಬೇಕು. ಜಗತ್ತು ಒಂದೇ ಭಾರತ ಮೋದಿಯವರ ಕನಸು. ವಿವೇಕಾನಂದರ ಪರಿಕಲ್ಪನೆ ಸಾಕಾರವಾಗಬೇಕು. ಯಾವ ದೇಶ ಮೋಸಗಾರರ ರಾಷ್ಟ್ರ ಅಂತ ಕರೀತಿದ್ರು, ಅದು ಈಗ ಬದಲಾಗಿದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಕೊಡುವ ಕೆಲಸ ಮಾಡಿದೆ. ಇನ್ನು 25ವರ್ಷ ತಾಯಿ ಭಾರತಿಯ ಸೇವೆ ಮಾಡೋಣ ಎಂದರು.

RELATED ARTICLES

Related Articles

TRENDING ARTICLES