ಬೆಂಗಳೂರು : ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಮಾಜಿ ಪ್ರಧಾನಿ ದೇವೇಗೌಡರು ಕೂಡ ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಈ ಪುಣ್ಯದಿನದಂದು ಈ ದೇಶಕ್ಕಾಗಿ ಹೋರಾಡಿದ ಎಲ್ಲಾ ವೀರರನ್ನು ವಿಧೇಯತೆಯಿಂದ ಸ್ಮರಿಸಿ ನಮನ ಸಲ್ಲಿಸುತ್ತಾ ನಮ್ಮ ಭಾರತೀಯತೆಯನ್ನು ಹೆಮ್ಮೆಯಿಂದ ಸಂಭ್ರಮಿಸೋಣ. ಹಾಗೆಯೇ ನಮ್ಮ ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಪ್ರತಿಯೊಬ್ಬ ಭಾರತೀಯನು ಪ್ರಾಮಾಣಿಕವಾಗಿ ಪಣ ತೊಡೋಣ ಎಂದು ಜನತೆಗೆ ಶುಭಾಶಯಗಳನ್ನು ಕೋರಿದರು.