ಬೆಂಗಳೂರು : ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿಧ್ವಜಾರೋಹಣಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಮೈದಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂದು ತ್ರಿವರ್ಣ ಧ್ವಜ ಹಾರಲಿದೆ.
ವಿವಾದಿತ ಜಾಗದಲ್ಲಿ ಧ್ವಜಾರೋಹಣ ಕಣ್ತುಂಬಿಕೊಳ್ಳಲು ಕಾತುರದಿಂದ ಜನ ಕಾಯುತ್ತಿದ್ದು, ರಾಜ್ಯದ ಜನರಿಗೆ ತೀವ್ರ ಕೂತುಹಲ ಕೆರಳಿದ ವಿವಾದಿತ ಜಾಗದಲ್ಲಿ ಇಂದು ತ್ರಿವರ್ಣ ಧ್ವಜ ಹಾರಲಿದೆ. 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಕಂಪ್ಲೀಟ್ ರೆಡಿಯಾದ ಚಾಮರಾಜಪೇಟೆ ಮೈದಾನ. ವಿವಾದಿತ ಮೈದಾನದಲ್ಲಿ ಕಂಡುಕೇಳಿದರ ರೀತಿಯಲ್ಲಿ ಖಾಕಿ ಕಣ್ಗಾವಲಿದೆ.
ಇನ್ನು, ಮೈದಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂದು ಹಾರ್ತಿದೆ ತ್ರಿವರ್ಣ ಧ್ವಜ ಹಾರಲಿದ್ದು, ಮೈದಾನದಲ್ಲಿ 75 ನೇ ಅಮೃತ ಮಹೋತ್ಸವ ಸಂಭ್ರಮಕ್ಕೆ ಹೈಲರ್ಟ್ ಘೋಷಿಸಲಾಗಿದೆ. ಧ್ವಜಾರೋಹಣ ಹಾರಿಸೋದಕ್ಕೆ ವಕ್ಛ್ ಬೋರ್ಡ್ಗೂ ಅವಕಾಶವಿಲ್ಲ,ಸ್ಥಳೀಯ ಎಂ.ಎಲ್ ಎ ಜಮೀರ್ಗೂ ಇಲ್ಲ. ಬೆಳಗ್ಗೆ 8 ಗಂಟೆಗೆ ಭಾರಿ ಪೊಲೀಸ್ ಭದ್ರತೆಯಲ್ಲಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಶಿವಣ್ಣ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.
ಧ್ವಜಾರೋಹಣ ಹಾರಿಸೋದಕ್ಕೆ ಈಗಾಗಲೇ ಸಿದ್ದತೆ ನಡೆಸಿರೋ ಕಂದಾಯ ಇಲಾಖೆ. ಮೈದಾನದಲ್ಲಿ ಧ್ವಜಾರೋಹಣ ದ ವೇಳೆ ಕಾನೂನು ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಲಾಗಿದೆ. ಧ್ವಜಾರೋಹಣ ಬಳಿಕ 500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಮೈದಾನದಲ್ಲಿ ವಂದೇ ಮಾತಂ,ಭಾರತ್ ಮಾತಾ ಕೀ ಜೈ ಘೋಷಣೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಮುಗಿಯುವರಿಗೆ ಮೈದಾನದ ಸುತ್ತ ಮುತ್ತ ಖಾಕಿ ಪಡೆ ಹದ್ದಿನ ಕಣ್ಣು ಇಟ್ಟಿದೆ.
ಅದಲ್ಲದೇ, ಭದ್ರತೆ ಹಿತದೃಷ್ಟಿಯಿಂದ ಮೈದಾನನಕ್ಕೆ ಬ್ಯಾರಿಗೇಟ್ ಆಳವಡಿಸಲಾಗಿದ್ದು, ಎಕ್ಸಿಟ್ ಹಾಗೂ ಎಂಟ್ರಿ ಗೇಟ್ ನಲ್ಲಿ ಮಾತ್ರ ಓಡಾಟ ನಡೆಸೋಕೆ ಅವಕಾಶ ನೀಡಲಾಗಿದೆ.ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಿರೋ ಕಂದಾಯ ಇಲಾಖೆ. ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವೀಕ್ಷಣೆಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಂಸದ ಪಿ ಸಿ ಮೋಹನ್ ಮತ್ತು, ಸ್ಥಳೀಯ ಶಾಸಕ ಜಮೀರ್ ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಕಂದಾಯ ಸಚಿವ ಆರ್ ಅಶೋಕ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗೋ ಸಾಧ್ಯತೆ ಇದೆ.