Wednesday, January 22, 2025

ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ಮಾಡಿಸಿದ ಸಿ.ಟಿ ರವಿ

ಬೆಂಗಳೂರು: 75ನೇ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ಮಾಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್​​​​​ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಸ್ವತಃ ತಾನೇ ನಿಂತು ಪೌರ ಕಾರ್ಮಿಕ ಮಹಿಳೆ ನಾಗಮ್ಮ ಅವರಿಂದ ಧ್ವಜಾರೋಹಣ ಮಾಡಿಸಿ ಗಮನ ಸೆಳೆದಿದ್ದಾರೆ.

ಕಾಫಿನಾಡಲ್ಲಿ ಅದ್ಧೂರಿ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಧ್ವಜಾರೋಹಣದಲ್ಲಿ 2000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ನಂತರ ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಿದರು. ನಂತರ ದೇಶ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರು.

RELATED ARTICLES

Related Articles

TRENDING ARTICLES